ಕರ್ನಾಟಕ

karnataka

ETV Bharat / state

ಮಂಗಳೂರು ನ್ಯಾಯಾಲಯದ ಹಿರಿಯ ಅಭಿಯೋಜಕ ಮಾರುತಿ ಟೊಂಕಣ್ಣ ನಿಧನ - ಮಂಗಳೂರು ಸುದ್ದಿ

ಮಂಗಳೂರು ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಾರುತಿ ಟೊಂಕಣ್ಣ ಮಾಂಗ್ಲಿ (52) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

maruti-tonkanna-death
ಮಾರುತಿ ಟೊಂಕಣ್ಣ ಮಾಂಗ್ಲಿ

By

Published : Feb 3, 2020, 6:59 PM IST

ಮಂಗಳೂರು : ಮಂಗಳೂರು ನ್ಯಾಯಾಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಾರುತಿ ಟೊಂಕಣ್ಣ ಮಾಂಗ್ಲಿ (52) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಮಾರುತಿ ಟೊಂಕಣ್ಣ ಮಾಂಗ್ಲಿ 2010ಕ್ಕೆ ಸರ್ಕಾರಿ ಸೇವೆಗೆ ಸೇರಿದ್ದರು. ಉತ್ತರ ಕನ್ನಡದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, 2016ರ ಜೂನ್‌ನಲ್ಲಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಮಂಗಳೂರಿನಲ್ಲಿ ಸೇವೆ ಆರಂಭಿಸಿದರು.

ಕೆಲವು ದಿನಗಳ ಹಿಂದೆ ಸರ್ಕಾರಿ ಅಭಿಯೋಜಕರಾಗಿ ಪದೋನ್ನತಿ ಹೊಂದಿದ್ದರು. ಆದರೆ ಹುದ್ದೆ ಖಾಲಿ ಇಲ್ಲದ ಕಾರಣ ವರ್ಗಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ABOUT THE AUTHOR

...view details