ಕರ್ನಾಟಕ

karnataka

ETV Bharat / state

ಪುತ್ತೂರು: ಡಿ. 20ರಂದು ಸೀಡ್ಸ್ ಆಫ್ ಹೋಪ್ ಕಾರ್ಯಕ್ರಮ - puttur

ಡಿ.20ರಂದು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಜೇಸಿಐ ಟ್ರೆನಿಂಗ್ ಹಾಲ್‌ನಲ್ಲಿ ಸೀಡ್ಸ್ ಆಫ್ ಹೋಪ್' ಕೇಶದಾನ ಕಾರ್ಯಕ್ರಮ ನಡೆಯಲಿದೆ.

Seeds of Hope program
ಡಿ. 20ರಂದು ಸೀಡ್ಸ್ ಆಫ್ ಹೋಪ್ ಕಾರ್ಯಕ್ರಮ

By

Published : Dec 19, 2020, 4:02 PM IST

ಪುತ್ತೂರು: ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡ ಟೀಚರ್ ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಕರ್ತವ್ಯಕ್ಕೆ ಹಾಜರಾಗಿರುವುದನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ನೆಚ್ಚಿನ ವಿದ್ಯಾರ್ಥಿನಿಯೋರ್ವಳು ಅಂದು ತಾನು ಕೈಗೊಂಡ ಸಂಕಲ್ಪ ಇಂದು ಕ್ಯಾನ್ಸರ್ ರೋಗಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಡಿ. 20ರಂದು ಸೀಡ್ಸ್ ಆಫ್ ಹೋಪ್ ಕಾರ್ಯಕ್ರಮ: ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ

ಪುತ್ತೂರಿನ 9 ಶಾಲಾ ವಿದ್ಯಾರ್ಥಿಗಳು ಮುಳಿಯ ಪ್ರತಿಷ್ಠಾನದ ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ಕ್ಯಾನ್ಸರ್‌ನಿಂದ ಕೂದಲು ಕಳೆದು ಕೊಳ್ಳುವವರಿಗೆ ವಿಗ್ ನೀಡುವ`ಸೀಡ್ಸ್ ಆಫ್ ಹೋಪ್' ಎಂಬ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಸೀಡ್ಸ್ ಆಫ್ ಹೋಪ್ ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ, ಮಡಿಕೇರಿಯಲ್ಲಿ 5ನೇ ತರಗತಿಯಲ್ಲಿ ನಾನು ಓದುತ್ತಿದ್ದ ಸಂದರ್ಭದಲ್ಲಿ ನನ್ನ ಟೀಚರ್‌ಗೆ ಆಗಿರುವ ಸಂಕಷ್ಟವನ್ನು ಮನಗಂಡು ಕೇಶದಾನದ ಯೋಜನೆಯನ್ನು ಹಾಕಿಕೊಂಡೆ. ಈ ಯೋಜನೆಗೆ ನನ್ನ ಇತರ 8 ಮಂದಿ ಸ್ನೇಹಿತರು ಕೈ ಜೋಡಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ನನ್ನ 10 ರಿಂದ 12 ಇಂಚಿನ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಿ ಉಚಿತವಾಗಿ ಒದಗಿಸುವ ಒಂದು ಸಂಸ್ಥೆಗೆ ದಾನ ಮಾಡಿದೆ ಎಂದು ತಿಳಿಸಿದರು.

ಓದಿ:ಪುತ್ತೂರು ವಿದ್ಯಾರ್ಥಿಗಳಿಂದ ಕೇಶದಾನ ಅಭಿಯಾನ

ನನ್ನ ತಂಡದಲ್ಲಿ ಇಷಾ ಸುಲೋಚನಾ ಮುಳಿಯ, ವರ್ಷ ಭಟ್, ನೇಹ ಭಟ್, ಅಕ್ಷಯ ಪಾರ್ವತಿ ಸರೋಳಿ, ಸಮರ್ಥರಾಮ ಮುಳಿಯ, ಕೌಶಲ್ ಎಸ್.ವೈ, ಕನ್ಯ ಸಚಿನ್ ಶೆಟ್ಟಿ, ಹಿತ ಕಜೆ ಕಾರ್ಯ ನಿರ್ವಹಿಸುತ್ತಿದ್ದು, ಮುಳಿಯ ಪ್ರತಿಷ್ಠಾನ, ರೋಟರಿ ಪುತ್ತೂರು ಈಸ್ಟ್, ರೋಟರಿ ಪುತ್ತೂರು ಸಿಟಿ, ಜೇಸಿಐ ಪುತ್ತೂರು, ಜೇಸಿರೆಟ್ ಪುತ್ತೂರು, ಇನ್ನರ್ ವೀಲ್ ಪುತ್ತೂರು, ಲೇಡಿಸ್ ಬ್ಯೂಟಿ ಅಸೋಸಿಯೇಶನ್, ಹೇರ್ ಕ್ರೌನ್ ಸಂಸ್ಥೆಗಳು ಕೈ ಜೋಡಿಸಿದೆ ಎಂದು ಅವರು ವಿವರಿಸಿದರು.

ಡಿ.20ರಂದು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಜೇಸಿಐ ಟ್ರೆನಿಂಗ್ ಹಾಲ್‌ನಲ್ಲಿ ಸೀಡ್ಸ್ ಆಫ್ ಹೋಪ್' ಕೇಶದಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಶದಾನ ಮಾಡಲು ಈಗಾಗಲೇ ಸುಮಾರು 50 ಮಂದಿ ಉತ್ಸುಕರಾಗಿದ್ದು, ಕಾರ್ಯಕ್ರಮದಂದು ಮೂವರಿಗೆ ವಿಗ್ ವಿತರಿಸಲಾಗುವುದು ಎಂದರು.

ABOUT THE AUTHOR

...view details