ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡದಲ್ಲಿ ಎರಡನೇ ಹಂತದ ಲಾಕ್​​​​ಡೌನ್ ಉತ್ತಮ ಸ್ಪಂದನೆ - ಕೋವಿಡ್ 19

ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಲಾಕ್​​​ಡೌನ್ ಇಂದಿನಿಂದ ಆರಂಭವಾಗಿದೆ.

mangaluru lockdown
ಮಂಗಳೂರು ಲಾಕ್​ಡೌನ್​

By

Published : Jul 16, 2020, 2:55 PM IST

ಮಂಗಳೂರು ( ದಕ್ಷಿಣ ಕನ್ನಡ):ಜಿಲ್ಲೆಯಲ್ಲಿ ಈವರೆಗೆ 2,525 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಬುಧವಾರ 73 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದರು.

ಈಗ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಒಟ್ಟು 1,089 ಮಂದಿ ಗುಣಮುಖರಾಗಿದ್ದು, 1,379 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು ಲಾಕ್​ಡೌನ್​

ಹೀಗೆ ದಿನೇ ದಿನೆ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್​​ಡೌನ್ ಘೋಷಿಸಲಾಗಿದೆ. ಈ ಲಾಕ್​​​​​ಡೌನ್ ವೇಳೆ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ದಿನಸಿ, ಸಾಮಗ್ರಿಗಳ ಖರೀದಿಗೆ ಅವಕಾಶವಿದ್ದು, ಉಳಿದಂತೆ ಸಂಪೂರ್ಣ ಬಂದ್ ಆಗಲಿದೆ.

ಆರೋಗ್ಯ, ಕೃಷಿ ಮತ್ತು ಸರಕಾರಿ ಸೇವೆಗಳನ್ನು ಹೊರತುಪಡಿಸಿ ಯಾವುದೇ ಖಾಸಗಿ ಅಂಗಡಿ ಕಚೇರಿಗಳು ತೆರೆಯುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಮಂಗಳೂರಿನಲ್ಲಿ ಎಲ್ಲ ಮಾರ್ಕೆಟ್​​ಗಳು ಖಾಲಿ ಖಾಲಿಯಾಗಿದ್ದು, ಖಾಸಗಿ ವಾಹನಗಳ ಓಡಾಟ ಕಡಿಮೆ ಇದೆ.

ಬಸ್ ಸಂಚಾರ ಸಂಪೂರ್ಣ ಸ್ಥಬ್ಧವಾಗಿದೆ. ಲಾಕ್​​​ಡೌನ್​ಗೆ ಎರಡು ದಿನಗಳ ಮುಂಚೆ ದಿನಸಿ ಸಾಮಗ್ರಿ ಖರೀದಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವುದರಿಂದ ಇಂದು ಗ್ರಾಹಕರು ಬೀದಿಗಿಳಿದಂತೆ ಕಾಣುತ್ತಿಲ್ಲ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘೋಷಿಸಲಾದ ಎರಡನೇ ಹಂತದ ಲಾಕ್​​ಡೌನ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ABOUT THE AUTHOR

...view details