ಮಂಗಳೂರು: ಕೊರೊನಾ ಲಾಕ್ ಡೌನ್ ಪರಿಣಾಮ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ನಡೆದಿದ್ದು, ದಕ್ಷಿಣ ಕನ್ನಡದಲ್ಲಿ ಒಟ್ಟು 26,486 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ : ಕರಾವಳಿಯಲ್ಲಿ 26,486 ವಿದ್ಯಾರ್ಥಿಗಳು ಹಾಜರು - ದಕ್ಷಿಣ ಕನ್ನಡ ಸುದ್ದಿ
ದ.ಕ.ಜಿಲ್ಲೆಯಲ್ಲಿ ಇಂದು ನಡೆದ ಇಂಗ್ಲೀಷ್ ಪರೀಕ್ಷೆಗೆ 26,952 ವಿದ್ಯಾರ್ಥಿಗಳು ನೊಂದಣಿ ಮಾಡಿದ್ದರು. ಆದರೆ ಒಟ್ಟು 26,486 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 466 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ : ಕರಾವಳಿಯಲ್ಲಿ 26,486 ವಿದ್ಯಾರ್ಥಿಗಳು ಹಾಜರು
ದ.ಕ.ಜಿಲ್ಲೆಯಲ್ಲಿ ಇಂದು ನಡೆದ ಇಂಗ್ಲೀಷ್ ಪರೀಕ್ಷೆಗೆ 26,952 ವಿದ್ಯಾರ್ಥಿಗಳು ನೊಂದಣಿ ಮಾಡಿದ್ದರು. ಆದರೆ ಒಟ್ಟು 26,486 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 466 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ದ.ಕ. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ದ.ಕ.ಜಿಲ್ಲೆಯ ಮಂಗಳೂರಿನ 24, ಮೂಡುಬಿದಿರೆಯ 4, ಬಂಟ್ವಾಳದ 7, ಪುತ್ತೂರಿನ 9, ಬೆಳ್ತಂಗಡಿಯ 4, ಸುಳ್ಯದ 3 ಸೇರಿ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಪರೀಕ್ಷೆ ನಡೆದಿದೆ. ಈ ಪೈಕಿ ಸರಕಾರಿ 12, ಅನುದಾನಿತ 22, ಅನುದಾನ ರಹಿತ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.