ಉಳ್ಳಾಲ: ಸಮುದ್ರ ತೀರದ ಭಾರೀ ಅಲೆಗಳಿಂದ ಅಪಾಯದಂಚಿನಲ್ಲಿದ್ದ ಸೋಮೇಶ್ವರ ಉಚ್ಚಿಲ-ಬಟ್ಟಪ್ಪಾಡಿಯ ರಸ್ತೆ ಸಂಪೂರ್ಣ ಸಮುದ್ರಪಾಲಾಗಿದೆ. ಜೊತೆಗೆ ಒಂದು ಮನೆ ಕೂಡ ಸಮುದ್ರ ಪಾಲಾಗಿದ್ದು, ರಸ್ತೆ ಕಡಿತದಿಂದಾಗಿ ಊರಿನ ನಾಲ್ಕು ಮನೆಗಳಿಗೆ ಸಂಪರ್ಕ ಕಡಿತವಾಗಿದೆ.
ಉಳ್ಳಾಲದಲ್ಲಿ ಕಡಲ್ಕೊರೆತ : ಸಮುದ್ರ ಪಾಲಾದ ಉಚ್ಚಿಲ - ಬಟ್ಟಪ್ಪಾಡಿ ರಸ್ತೆ - ಉಳ್ಳಾಲದಲ್ಲಿ ಕಡಲ್ಕೊರೆತ ಸುದ್ದಿ
ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ಸಮುದ್ರ ಬಿರುಸುಗೊಂಡಿತ್ತು. ಎರಡು ದಿನಗಳಿಂದ ಉಚ್ಚಿಲ, ಸೋಮೇಶ್ವರ, ಕೈಕೋ, ಕಿಲಿರಿಯಾನಗರ, ಮುಕ್ಕಚ್ಚೇರಿ ಭಾಗಗಳಲ್ಲಿ ಕಡಲ್ಕೊರೆತ ತಡೆಗೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗಿವೆ. ಇಂದು ಬೆಳಗ್ಗೆ ಅಪಾಯದಂಚಿನಲ್ಲಿದ್ದ ಉಚ್ಚಿಲ- ಬಟ್ಟಪ್ಪಾಡಿಯ ರಸ್ತೆಗೆ ಭಾರೀ ಗಾತ್ರದ ಅಲೆ ಬಡಿದು ರಸ್ತೆ ಮುಳುಗಿ ಹೋಗಿದೆ.
ಬಟ್ಟಪ್ಪಾಡಿಯಲ್ಲಿದ್ದ ರೇವತಿ ಎಂಬುವವರ ಮನೆ ಸಂಪೂರ್ಣ ಸಮುದ್ರ ಪಾಲಾಗಿದ್ದು, ಅವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ಸಮುದ್ರ ಬಿರುಸುಗೊಂಡಿತ್ತು. ಎರಡು ದಿನಗಳಿಂದ ಉಚ್ಚಿಲ, ಸೋಮೇಶ್ವರ, ಕೈಕೋ, ಕಿಲಿರಿಯಾನಗರ, ಮುಕ್ಕಚ್ಚೇರಿ ಭಾಗಗಳಲ್ಲಿ ಕಡಲ್ಕೊರೆತ ತಡೆಗೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗಿವೆ. ಇಂದು ಬೆಳಗ್ಗೆ ಅಪಾಯದಂಚಿನಲ್ಲಿದ್ದ ಉಚ್ಚಿಲ- ಬಟ್ಟಪ್ಪಾಡಿಯ ರಸ್ತೆಗೆ ಭಾರೀ ಗಾತ್ರದ ಅಲೆ ಬಡಿದು ರಸ್ತೆ ಮುಳುಗಿ ಹೋಗಿದೆ.
ಘಟನಾ ಸ್ಥಳಕ್ಕೆ ಎಸಿಪಿ ಕೋದಂಡರಾಮ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ರಸ್ತೆಬದಿಯಲ್ಲಿ ನೆರೆದಿದ್ದ ಸ್ಥಳೀಯರನ್ನು ಕಳುಹಿಸಿದರು. ಸ್ಥಳದಲ್ಲಿ ಯಾರೂ ನಿಲ್ಲದಂತೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಸೋಮೇಶ್ವರ ಪುರಸಭೆ ಪೌರಾಯುಕ್ತೆ ವಾಣಿ ಆಳ್ವ ಭೇಟಿ ನೀಡಿ ಸಮುದ್ರಪಾಲಾದ ಮನೆಯ ಮಾಹಿತಿ ಪಡೆದರು. ರಸ್ತೆ ಕಡಿತಗೊಂಡು ಅಪಾಯದಲ್ಲಿರುವ ಇತರೆ ನಾಲ್ಕು ಮನೆಮಂದಿಗೆ ಉಚ್ಚಿಲ ಬೋವಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲು ಸೂಚಿಸಿ, ಅಲ್ಲಿ ಉಳಿಯುವಂತೆ ತಿಳಿಸಿದರು.