ಮಂಗಳೂರು: ಬೋಟ್ ದುರಂತದಲ್ಲಿ ಸಮುದ್ರ ಸೇರಿದ ಓರ್ವನ ಮೃತದೇಹ ಪತ್ತೆಗೆ ನಾಲ್ಕನೇ ದಿನವಾದ ಇವತ್ತೂ ಕೂಡಾ ಹುಡುಕಾಟ ಮುಂದುವರೆದಿದೆ.
ಘಟನೆ ಹೀಗೆ ನಡೆಯಿತು..
ಮಂಗಳೂರು: ಬೋಟ್ ದುರಂತದಲ್ಲಿ ಸಮುದ್ರ ಸೇರಿದ ಓರ್ವನ ಮೃತದೇಹ ಪತ್ತೆಗೆ ನಾಲ್ಕನೇ ದಿನವಾದ ಇವತ್ತೂ ಕೂಡಾ ಹುಡುಕಾಟ ಮುಂದುವರೆದಿದೆ.
ಘಟನೆ ಹೀಗೆ ನಡೆಯಿತು..
ಶ್ರೀರಕ್ಷಾ ಎಂಬ ಬೋಟ್ ಮೀನುಗಳನ್ನು ತುಂಬಿಸಿಕೊಂಡು ವಾಪಸ್ ಬರುವ ವೇಳೆ ಇತ್ತೀಚೆಗೆ ಅಳಿವೆ ಬಾಗಿಲಿನಲ್ಲಿ ದುರಂತಕ್ಕೀಡಾಗಿತ್ತು. ಪರಿಣಾಮ, ಆರು ಮಂದಿ ಮೀನುಗಾರರು ಮೃತಪಟ್ಟಿದ್ದರು. ಈ ಪೈಕಿ ಐವರ ಮೃತದೇಹ ಪತ್ತೆಯಾಗಿತ್ತು.
ಓದಿ: ಬೋಟ್ ದುರಂತ: ದಿನವಿಡೀ ಹುಡುಕಿದರೂ ಪತ್ತೆಯಾಗದ ಕೈತಪ್ಪಿಹೋದ ಶವ
ಅನ್ಸಾರ್ ಮೃತದೇಹ ಸಿಕ್ಕಿತಾದರೂ ಸಮುದ್ರದಾಳದಿಂದ ಮೇಲಕ್ಕೆ ತರುವಾಗ ಮುಳುಗು ತಜ್ಞರ ಕೈಜಾರಿ ಮತ್ತೆ ಸಮುದ್ರದಾಳ ಸೇರಿತ್ತು. ಇದಾಗಿ ಎರಡು ದಿನವಾದರೂ ಮೃತದೇಹ ಸಿಕ್ಕಿರಲಿಲ್ಲ. ಈ ಕಾರಣದಿಂದ ಇಂದು ಮತ್ತೆ ಜಿಲ್ಲಾಡಳಿತದ ನೇತೃತ್ವದಲ್ಲಿ ಕೋಸ್ಟ್ ಗಾರ್ಡ್, ಮುಳುಗು ತಜ್ಞರು, ಮೀನುಗಾರರು ಶೋಧ ಮುಂದುವರೆಸಿದ್ದಾರೆ.