ಮಂಗಳೂರು:ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುವ ನೆಪದಲ್ಲಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರಿಗೆ, ಮಂಗಳೂರಿನಲ್ಲಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಟೆಕ್ಕಿಯೊಬ್ಬರು ನಗರ ಸುತ್ತಾಡಿದ ಬಳಿಕ ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ಹೆಲಿಕಾಪ್ಟರ್ ಇರುವ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಬುಕ್ಕಿಂಗ್ ಮಾಡುವ ನೆಪದಲ್ಲಿ 38,060 ರೂ.ಪಡೆದು ವಂಚಿಸಿದ್ದಾನೆ.
ಮಾ. 3 ರಂದು ಘಟನೆ ನಡೆದಿದ್ದು, ಮಂಗಳೂರಿನಲ್ಲಿ ಸುತ್ತಾಡಿದ ಬಳಿಕ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಈ ವೇಳೆ, ವಿಮಾನ ಇಲ್ಲದಿರುವುದು ತಿಳಿದು ಬಂದಿದೆ. ಬಳಿಕ ಖಾಸಗಿ ಹೆಲಿಕಾಪ್ಟರ್ ಇದೆಯೇ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ವೆಬ್‌ಸೈಟ್ ಒಂದು ಸಿಕ್ಕಿದೆ. ಅದನ್ನು ಸಂಪರ್ಕಿಸಿದಾಗ, ನಿತಿನ್ ಎಂಬ ವ್ಯಕ್ತಿ ಫೋನ್ ಕರೆಗೆ ಸಿಕ್ಕಿದ್ದಾನೆ.