ಕರ್ನಾಟಕ

karnataka

ETV Bharat / state

'ಕಾಸರಗೋಡು-ಮಂಗಳೂರು ನಿತ್ಯ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾತ್ರ ಆಗಲಿ' - Screening only for regular travelers between Kasaragodu-Mangalore border

ಕಾಸರಗೋಡು-ಮಂಗಳೂರು ಗಡಿ ನಡುವೆ ನಿತ್ಯ ಪ್ರಯಾಣ ಮಾಡುವವರಿಗೆ ಸ್ಕ್ರೀನಿಂಗ್ ಮಾತ್ರ ಆಗಲಿ, ತಪಾಸಣೆಯ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ.

Dr. C.N. Ashwaththa Narayan
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್

By

Published : Feb 24, 2021, 8:47 PM IST

Updated : Feb 24, 2021, 11:18 PM IST

ಮಂಗಳೂರು: ಕಾಸರಗೋಡು ಗಡಿಭಾಗದಲ್ಲಿ ಬಹಳಷ್ಟು ಮಂದಿ ಮಂಗಳೂರನ್ನು ಅವಲಂಬಿಸುತ್ತಿದ್ದು, ಬಂದು ಹೋಗುತ್ತಿರುವವರಿಗೆ ಹೆಚ್ಚಿನ ಅನಾನುಕೂಲತೆ ಆಗಬಾರದು. ಸ್ಕ್ರೀನಿಂಗ್ ಮಾತ್ರ ಆಗಲಿ, ತಪಾಸಣೆ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.

ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್

ಮಂಗಳೂರಿನಲ್ಲಿ ಮಾತನಾಡಿದ ಅವರು,‌ ತಪಾಸಣೆ ಮಾಡುವ ಮೂಲಕ‌ ನಿತ್ಯ ಗಡಿ ಭಾಗಗಳಲ್ಲಿ ಸಂಚಾರ ಮಾಡುವ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅನಾನುಕೂಲ ಆಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಆರೋಗ್ಯ ಸೇತು‌ ಆ್ಯಪ್ ಡೌನ್​ ಲೋಡ್ ಮಾಡಿಕೊಂಡಲ್ಲಿ ಟ್ರ್ಯಾಕಿಂಗ್ ಹಾಗೂ ಮಾನಿಟರ್ ಮಾಡಲು ಪರಿಣಾಮಕಾರಿ ಆಗಲಿದೆ ಎಂದರು.

ಓದಿ:ಪಿಎಫ್ಐ, ಎಸ್​ಡಿಪಿಐ ಬೆಳವಣಿಗೆಗೆ ಕಾರಣವಾಗಿರುವ ಕಾಂಗ್ರೆಸ್ ಪಕ್ಷವೇ ಅವುಗಳ ಬಿ ಟೀಂ: ಅಶ್ವತ್ಥ ನಾರಾಯಣ

ಭಾರತ ಸರ್ಕಾರದ ನಿರ್ದೇಶನದಂತೆ ಬಂದು ಹೋಗುವವರಿಗೆ ಏನೂ ಅನಾನುಕೂಲ ಆಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರಿಗೆ ತಿಳಿಸುತ್ತೇನೆ. ವಿವಿಧ ಕಾರಣಗಳಿಗೆ ಬಂದು ಮಂಗಳೂರಿನಲ್ಲಿ ಉಳಿದುಕೊಳ್ಳುವವರಿಗೆ ನೆಗೆಟಿವ್ ವರದಿ ಕಡ್ಡಾಯ ಇರಬೇಕು. ಆದರೆ ಪ್ರತಿನಿತ್ಯ ಬಂದು ಹೋಗುವವರು ಎಷ್ಟು ಸಲ ಎಂದು ತಪಾಸಣೆ ಮಾಡಿ ನೆಗೆಟಿವ್ ವರದಿ ತರಲಾಗುತ್ತದೆ. ಹೀಗಾಗಿ ಆರೋಗ್ಯ ಸೇತು ಆ್ಯಪ್ ಡೌನ್​​ಲೋಡ್​ ಮಾಡಿಕೊಂಡಲ್ಲಿ‌ ಟ್ರ್ಯಾಕ್ ಮಾಡೋದು ಸುಲಭ ಆಗಲಿದೆ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.

Last Updated : Feb 24, 2021, 11:18 PM IST

For All Latest Updates

ABOUT THE AUTHOR

...view details