ಬಂಟ್ವಾಳ: ತೀವ್ರ ಗಾಳಿ, ಮಳೆಗೆ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದಿದ್ದು, ಕಟ್ಟಡ ಸಂಪೂರ್ಣ ಹಾನಿಗೊಳಗಾಗಿರುವ ಘಟನೆ ತಾಲೂಕಿನ ನಡುಮೊಗರು ಎಂಬಲ್ಲಿ ನಡೆದಿದೆ.
ಬಂಟ್ವಾಳ: ಗಾಳಿ, ಮಳೆಗೆ ಹಾನಿಗೊಳಗಾದ ಶಾಲಾ ಕಟ್ಟಡ - Bantvala latest news
ಬಂಟ್ವಾಳ ತಾಲೂಕಿನಲ್ಲಿ ಮಳೆಯಾಗುತ್ತಿದ್ದು, ನಿನ್ನೆ ಸುರಿದ ಮಳೆಗೆ ಶಾಲಾ ಕಟ್ಟಡವೊಂದು ಹಾನಿಯೊಳಗಾಗಿರುವ ಘಟನೆ ನಡೆದಿದೆ.

Bantvala
ಶಾಲಾ ಕುಸಿದ ಕಟ್ಟಡ ಹಳೆಯದಾಗಿದ್ದು, ಕಳೆದ ಬಾರಿ ಅದರ ಮೇಲ್ಛಾವಣಿ ದುರಸ್ತಿ ಮಾಡಲಾಗಿತ್ತು. ನಿನ್ನೆ ಸುರಿದ ಗಾಳಿ, ಮಳೆಗೆ ಕಟ್ಟಡ ಹಾನಿಯಾಗಿದೆ. ಘಟನೆ ಕುರಿತು ಸ್ಥಳೀಯರು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಲ್ಲಿ ಆಗಾಗ್ಗೆ ಗಾಳಿಯೊಂದಿಗೆ ಮಳೆಯಾಗುತ್ತಿದ್ದು, ಮೊದಲೇ ಜೀರ್ಣಾವಸ್ಥೆಯಲ್ಲಿದ್ದ ಕಟ್ಟಡ ಅಪಾಯದಂಚಿನಲ್ಲಿತ್ತು. ಇದೀಗ ಸತತ ಮಳೆಯಿಂದ ಮೇಲ್ಛಾವಣಿ ಕುಸಿದಿದ್ದು, ಯಾವುದೇ ಕ್ಷಣದಲ್ಲೂ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದೆ.