ಮಂಗಳೂರು; ಕೊರೊನಾ ಬಳಿಕ ಮತ್ತೊಮ್ಮೆ ಎಸ್ ಸಿಡಿಸಿಸಿ (ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಪುಟಿದೆದ್ದಿದ್ದು , ಕಳೆದ ವರ್ಷಕ್ಕಿಂತ 11 ಶೇ.11 ರಷ್ಟು ಹೆಚ್ಚು ಠೇವಣಿ ಸಂಗ್ರಹವಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಕೊರೊನಾ ಬಳಿಕ ಬ್ಯಾಂಕ್ನಲ್ಲಿ ಶೇ. 11ರಷ್ಟು ಠೇವಣಿ ಹೆಚ್ಚಳ : ವಾಹನ ಸಾಲಕ್ಕೂ ಡಿಮ್ಯಾಂಡ್ - ಎಸ್ ಸಿಡಿಸಿಸಿ ಬ್ಯಾಂಕ್ನಲ್ಲಿ ಕೊರೊನಾ ಬಳಿಕ ಠೇವಣಿ ಹೆಚ್ಚಳ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಕೋವಿಡ್-19 ತರುವಾಯ ಠೇವಣಿ ಸಂಗ್ರಹದಲ್ಲಿ ಶೇ.11 ರಷ್ಟು ಹೆಚ್ಚಳವಾಗಿದ್ದು, ವಾಹನ ಸಾಲಕ್ಕೆ ಸಹ ಬೇಡಿಕೆ ಹೆಚ್ಚಾಗಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ..
ಕೊರೊನಾ ಬಳಿಕ ಬ್ಯಾಂಕ್ನಲ್ಲಿ ಶೇ. 11ರಷ್ಟು ಠೇವಣಿ ಹೆಚ್ಚಳ
ಅಕ್ಟೋಬರ್ 15 ರಂದು ಮಂಗಳೂರಿನ ಕೊಡಿಯಾಲ್ ಬೈಲ್ನ ಟಿ.ವಿ. ರಮಣ ಪೈ ಕನ್ವೆನ್ಷನ್ ಹಾಲ್ನಲ್ಲಿ 67 ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಉದ್ಘಾಟಿಸಲಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ರು.