ಕರ್ನಾಟಕ

karnataka

ETV Bharat / state

ಪುತ್ತೂರಿಗೆ ಮತ್ತೆ ಎದುರಾದ ಲಸಿಕೆ ಕೊರತೆ.. ಸರಕಾರಿ ಆಸ್ಪತ್ರೆಗಳಲ್ಲಿ 'ನೋ ವ್ಯಾಕ್ಸಿನ್' ಬೋರ್ಡ್ - Dakshina kannada news

ಮೇ 5ಕ್ಕೆ ಸರಕಾರಿ ಆಸ್ಪತ್ರೆಗೆ 200 ಕೋವಿಡ್ ಲಸಿಕೆ ವಿತರಣೆ ಆಗಿದ್ದು, ಮೇ 6ರಂದು ಮತ್ತೆ ಲಸಿಕೆ ಕೊರತೆ ಎದುರಾಗಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಈ ದಿನ ವ್ಯಾಕ್ಸಿನ್ ಲಭ್ಯ ಇರುವುದಿಲ್ಲ ಎಂದು ಬೋರ್ಡ್ ಹಾಕಲಾಗಿತ್ತು.

puttur
puttur

By

Published : May 6, 2021, 5:15 PM IST

ಪುತ್ತೂರು(ದ.ಕ):ಕೋವಿಡ್ ನಿಯಂತ್ರಣಕ್ಕಾಗಿ ವ್ಯಾಕ್ಸಿನ್‌ಗಳ ಬೇಡಿಕೆ ಹೆಚ್ಚಾಗಿ ಪುತ್ತೂರಿನಲ್ಲಿ ಕಳೆದೆರಡು ದಿನಗಳಿಂದ ಲಸಿಕೆ ಕೊರತೆ ಉಂಟಾಗಿದೆ.

ಮೇ. 5ರಂದು ಪುತ್ತೂರಿಗೆ ಬಂದಿರುವ 1 ಸಾವಿರ ಲಸಿಕೆ ಅದೇ ದಿನ ಸಂಜೆಯೊಳಗೆ ಖಾಲಿಯಾಗಿದ್ದು, ಮೇ 6ರಂದು ಮತ್ತೆ ಲಸಿಕೆ ಕೊರತೆ ಎದುರಾಗಿದೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಈ ದಿನ ವ್ಯಾಕ್ಸಿನ್ ಲಭ್ಯ ಇರುವುದಿಲ್ಲ ಎಂದು ಬೋರ್ಡ್ ಹಾಕಲಾಗಿತ್ತು.

ಆದರೆ, ಮೇ 5 ಕ್ಕೆ ಸರಕಾರಿ ಆಸ್ಪತ್ರೆಗೆ 200 ಕೋವಿಡ್ ಲಸಿಕೆ ವಿತರಣೆ ಆಗಿದ್ದು, ಉಳಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 50ರಂತೆ ಮತ್ತು ಉಪ್ಪಿನಂಗಡಿ ಮತ್ತು ಕಡಬ ಸಮುದಾಯ ಆಸ್ಪತ್ರೆಗೆ ತಲಾ 100 ಲಸಿಕೆ ವಿತರಣೆ ಆಗಿತ್ತು. ಆದರೆ, ಆ ಎಲ್ಲ ಲಸಿಕೆಗಳು ಒಂದೇ ದಿನ ಖಾಲಿಯಾಗಿದ್ದು, ಇದೀಗ ಮತ್ತೆ ಲಸಿಕೆ ಕೊರತೆ ಎದುರಾಗಿದೆ.

ABOUT THE AUTHOR

...view details