ಎನ್ಎಸ್ಯುಐ ದ.ಕ. ಜಿಲ್ಲಾಧ್ಯಕ್ಷರಾಗಿ ಸವಾದ್ ಸುಳ್ಯ ನೇಮಕ - NSUI District SecretarySawad Suliah
ವಿದ್ಯಾರ್ಥಿಗಳ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸವಾದ್ ಸುಳ್ಯ ಅವರು ಸಾಮಾಜಿಕ ಸಂಘಟನೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದವರು. ಡ್ರಗ್ಸ್ ವಿರುದ್ಧ ಜಿಲ್ಲಾದ್ಯಂತ ಅಭಿಯಾನ ಕೂಡ ಮಾಡಿದ್ದರು, ಎಸ್ಎಸ್ಯುಐ ಆಯೋಜಿಸಿದ ರಾಷ್ಟ್ರೀಯ ಮತ್ತು ರಾಜ್ಯ ಶಿಬಿರಗಳಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಮಂಗಳೂರು:ಎನ್ಎಸ್ಯುಐ ದ.ಕ.ಜಿಲ್ಲಾಧ್ಯಕ್ಷರಾಗಿ ಸವಾದ್ ಸುಳ್ಯ ಅವರನ್ನು ನೇಮಕಗೊಳಿಸಿ ರಾಷ್ಟ್ರೀಯ ಎನ್ಎಸ್ಯುಐ ಕಾರ್ಯದರ್ಶಿ ಎರಿಕ್ ಸ್ಟೀಫನ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
ಸುಳ್ಯದ ಉದ್ಯಮಿ ನಾವೂರು ಅಬೂಬಕ್ಕರ್ ಮತ್ತು ಮೈಮೂನ ದಂಪತಿಯ ಪುತ್ರರಾಗಿರುವ ಮಹಮ್ಮದ್ ಸವಾದ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆ ಮತ್ತು ವಿದ್ಯಾರ್ಥಿಗಳ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಪ್ರೌಢಶಾಲೆಯಲ್ಲಿರುವಾಗಲೇ ಎನ್ಎಸ್ಯುಐ ವಿದ್ಯಾರ್ಥಿ ನಾಯಕರಾಗಿ, ಕಾಲೇಜು ಘಟಕದ ಅಧ್ಯಕ್ಷರಾಗಿ, ಸುಳ್ಯ ನಗರ ಅಧ್ಯಕ್ಷರಾಗಿ, ಜಿಲ್ಲಾ ಸಂಯೋಜಕರಾಗಿ, ರಾಜ್ಯ ಚುನಾಯಿತ ಕಾರ್ಯದರ್ಶಿಯಾಗಿ, ಪ್ರಸ್ತುತ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.