ದಕ್ಷಿಣಕನ್ನಡ:ಕೊರೊನಾ ಸಂದರ್ಭದಲ್ಲಿ ಎಲ್ಲ ಕಡೆಗಳಿಗೂ ತೆರಳಿ ಜನಜಾಗೃತಿ ಮಾಡುವ ಇಲಾಖೆಗಳಿಗೆ ಬಂಟ್ವಾಳ ಫರಂಗಿಪೇಟೆ ಸೇವಾಂಜಲಿ ಟ್ರಸ್ಟ್ನಿಂದ ಸ್ಯಾನಿಟೈಸರ್ ಬಳಕೆಯ ಯಂತ್ರಗಳನ್ನ ಒದಗಿಸಲಾಯಿತು.
ಇಲಾಖೆಗಳ ಸಿಬ್ಬಂದಿ ಸುರಕ್ಷತೆಗೆ ಸಾನಿಟೈಸರ್ ಉಪಕರಣ - Sanitizer Safe Use Equipment
ಬಂಟ್ವಾಳ ಫರಂಗಿಪೇಟೆ ಸೇವಾಂಜಲಿ ಟ್ರಸ್ಟ್ನಿಂದ ಪೊಲೀಸ್, ಮಿನಿ ವಿಧಾನಸೌಧ, ತಾಲೂಕು ಸರ್ಕಾರಿ ಆಸ್ಪತ್ರೆ ಸಹಿತ ಜನಸಂಪರ್ಕ ನಡೆಸುವ ಇಲಾಖೆ ಸಿಬ್ಬಂದಿಗೆ ಅಗತ್ಯವಾಗಿ ಬೇಕಾದ ಸ್ಯಾನಿಟೈಸರ್ ಸುರಕ್ಷಿತ ಬಳಕೆ ಉಪಕರಣವನ್ನ ಒದಗಿಸಲಾಯಿತು.
![ಇಲಾಖೆಗಳ ಸಿಬ್ಬಂದಿ ಸುರಕ್ಷತೆಗೆ ಸಾನಿಟೈಸರ್ ಉಪಕರಣ Sanitizer is a safe use tool for departments with people](https://etvbharatimages.akamaized.net/etvbharat/prod-images/768-512-6931929-thumbnail-3x2-viji.jpg)
ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದಿಂದ ಸಂಸ್ಥೆಯ ಟ್ರಸ್ಟಿ ಅರ್ಜುನ್ ಪೂಂಜಾ ವಿನ್ಯಾಸಗೊಳಿಸಿದ ಸ್ಯಾನಿಟೈಸರ್ ಉಪಕರಣದ ಕುರಿತು ಈಗಾಗಲೇ ಈಟಿವಿ ಭಾರತ ವರದಿ ಮಾಡಿದೆ. ಬಂಟ್ವಾಳದಲ್ಲಿ ಈಗಾಗಲೇ ಕೋವಿಡ್ನಿಂದ ಇಬ್ಬರು ಮೃತರಾಗಿದ್ದು, ಆ ಪರಿಸರದಲ್ಲೇ ಕರ್ತವ್ಯ ನಿರ್ವಹಿಸುವ ಪೊಲೀಸ್, ಮಿನಿ ವಿಧಾನಸೌಧ, ತಾಲೂಕು ಸರ್ಕಾರಿ ಆಸ್ಪತ್ರೆ ಸಹಿತ ಜನಸಂಪರ್ಕ ನಡೆಸುವ ಇಲಾಖೆ ಸಿಬ್ಬಂದಿಗೆ ಅಗತ್ಯವಾಗಿ ಬೇಕಾದ ಸ್ಯಾನಿಟೈಸರ್ನ್ನು ಸುರಕ್ಷಿತವಾಗಿ ಬಳಸುವ ಉಪಕರಣವನ್ನ ಸೇವಾಂಜಲಿ ಹಸ್ತಾಂತರಿದೆ.
ಕೈಯಿಂದ ಯಂತ್ರವನ್ನು ಮುಟ್ಟದೆಯೇ ಸ್ಯಾನಿಟೈಸರ್ ಪಡೆಯಬಹುದಾಗಿದ್ದು,ಎಲ್ಲಾ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.