ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕಾಸರಗೋಡು ಜಿಲ್ಲಾಡಳಿತ ದ.ಕ ಜಿಲ್ಲೆಯಿಂದ ಕೇರಳ ಪ್ರವೇಶಿಸುವ ವಾಹನಗಳಿಗೆ ಗಡಿ ಭಾಗ ತಲಪಾಡಿಯಲ್ಲಿ ಸರಕು ವಾಹನಗಳಿಗೆ ಸ್ಯಾನಿಟೈಸರ್ ಮಾಡುತ್ತಿದೆ.
ಕಾಸರಗೋಡು ಜಿಲ್ಲಾಡಳಿತದಿಂದ ದ.ಕ ಜಿಲ್ಲೆಯಿಂದ ಕೇರಳ ಪ್ರವೇಶಿಸುವ ವಾಹನಗಳಿಗೆ ಸ್ಯಾನಿಟೈಸರ್ - ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು
ಗಡಿ ಪ್ರದೇಶವಾದ ತಲಪಾಡಿಯಲ್ಲಿ ಜನರ ಸಂಚಾರವೂ ಕಡಿಮೆಯಾಗಿದ್ದು, ಸ್ಥಳೀಯ ಚೆಕ್‍ಪೋಸ್ಟ್ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ತಪಾಸಣೆ ನಡೆಸುವುದನ್ನು ಕಡಿಮೆ ಮಾಡಿದೆ..
ಗಡಿ ಪ್ರದೇಶವಾದ ತಲಪಾಡಿಯಲ್ಲಿ ಜನರ ಸಂಚಾರವೂ ಕಡಿಮೆಯಾಗಿದ್ದು, ಸ್ಥಳೀಯ ಚೆಕ್‍ಪೋಸ್ಟ್ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ತಪಾಸಣೆ ನಡೆಸುವುದನ್ನು ಕಡಿಮೆ ಮಾಡಿದೆ. ಕಾಸರಗೋಡು ಪ್ರವೇಶಿಸಿರುವ ಪ್ರತಿ ವಾಹನ ಸೇರಿ ಸರಕು ವಾಹನಗಳ ಮೇಲೆ ತೀವ್ರ ನಿಗಾ ಇಟ್ಟಿದೆ. ಮೇಲಿನ ತಲಪಾಡಿ ವಿಶ್ವಾಸ್ ಆಡಿಟೋರಿಯಂ ಬಳಿ ಸರಕು ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಸಂಚಾರಕ್ಕೆ ಅವಕಾಶ ನೀಡುತ್ತಿದೆ.
ಪ್ರಯಾಣಿಕರು ಕಡಿಮೆಯಾಗುತ್ತಿದ್ದಂತೆ ಗಡಿ ಪ್ರದೇಶವಾದ ತಲಪಾಡಿಯಿಂದ ಮಂಗಳೂರು ಸಂಚರಿಸುವ ಖಾಸಗಿ ಬಸ್‍ಗಳ ಖಾಲಿ ಹೊಡೆಯುತ್ತಿವೆ. ಈ ನಡುವೆ ಟೋಲ್ನಲ್ಲಿ ಶೇ.75 ಕಲೆಕ್ಷನ್ ಕಡಿತವಾಗಿದೆ ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ.