ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ಮೊದಲ ಬಾರಿಗೆ ಮಹಿಳಾ ಕಲಾವಿದರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ - ಈಟಿವಿ ಭಾರತ ಕನ್ನಡ ನ್ಯೂಸ್​​​

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕಲಾವಿದರೇ ಸೇರಿಕೊಂಡು ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ಪ್ರದರ್ಶನ ಮಾಡಿದ್ದಾರೆ. ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಮಹಿಳಾ ಕಲಾವಿದರೇ ಭಾಗವಹಿಸಿದ್ದು ಈ ಯಕ್ಷಗಾನ ಪ್ರದರ್ಶನದ ವಿಶೇಷತೆಯಾಗಿತ್ತು.

sampurna-sridevi-mahatme-yakshagana-performance-by-25-female-artistes
ಮಂಗಳೂರು : 25 ಮಹಿಳಾ ಕಲಾವಿದರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

By

Published : Oct 15, 2022, 7:49 PM IST

ಮಂಗಳೂರು: ಗಂಡು ಕಲೆ ಎಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನ ಕಲೆಗೆ ಕೆಲವು ವರ್ಷಗಳ ಹಿಂದೆಯೇ ಮಹಿಳೆಯರ ಪ್ರವೇಶವಾಗಿದೆ. ಮಹಿಳೆಯರು ಯಕ್ಷಗಾನ ಕಲಾವಿದರಾಗಿ ಯಕ್ಷ ಪ್ರದರ್ಶನ ನೀಡುವುದು ಅಲ್ಲಲ್ಲಿ ಕಾಣಬಹುದು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯರಿಂದಲೇ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆದಿದೆ.

ಮಹಿಳಾ ಕಲಾವಿದರು ವಿವಿಧ ಪಾತ್ರದಲ್ಲಿ

ಇಲ್ಲಿನ ತಲಕಳ ಕೊಳಂಬೆ ಶ್ರೀ ಕಾಶೀ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಯಕ್ಷಗಾನದಲ್ಲಿ 25 ಮಂದಿ ಮಹಿಳಾ ಕಲಾವಿದರು ಮಾತ್ರ ಪ್ರದರ್ಶನ ನೀಡಿದ್ದಾರೆ. ಈ ಪ್ರಯೋಗದಲ್ಲಿ ಹಿಮ್ಮೇಳದಲ್ಲಿ ಇರುವ ಭಾಗವತರು, ಮದ್ದಳೆ, ಚೆಂಡೆ , ಸಹಾಯಕರು, ದೊಂದಿ ಹಿಡಿಯುವವರು, ರಾಳದ ಪುಡಿ ಹಿಡಿಯುವವರು, ಮುಮ್ಮೇಳದಲ್ಲಿ ಎಲ್ಲಾ ವೇಷಧಾರಿಗಳು ಮಹಿಳೆಯರೇ ಆಗಿದ್ದರೆಂಬುದು ವಿಶೇಷ. ಇದು ಯಕ್ಷರಂಗದಲ್ಲಿ ಒಂದು ಅಪರೂಪದ ಪ್ರಯೋಗವಾಗಿದೆ.

ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ
ಮಹಿಳಾ ಕಲಾವಿದರು ವಿವಿಧ ಪಾತ್ರದಲ್ಲಿ

ಇನ್ನು 'ಸಂಪೂರ್ಣ ಶ್ರೀ ದೇವಿ ಮಹಾತ್ಮೆ' ಪ್ರಸಂಗದಲ್ಲಿ ಶ್ರೀ ದೇವೀ ಪಾತ್ರವನ್ನು ಅನನ್ಯಾ ಸುವರ್ಣ ಮುರನಗರ, ಮಹಿಷಾಸುರ ಹಾಗೂ ರಕ್ತಬೀಜಾಸುರ ಪಾತ್ರವನ್ನು ಶಮಾ ಕೆ . ಕತ್ತಲ್‌ಸಾರ್, ಮಾಲಿನಿ ಶ್ರಾವ್ಯ ಕೆ . ಕತ್ತಲ್ ಸಾರ್, ಆದಿಮಾಯೆ ಪಾತ್ರವನ್ನು ಮೈತ್ರಿ ಉಡುಪ ಕತ್ತಲ್ಸಾರ್ , ಶುಂಭ ಪಾತ್ರವನ್ನು ನಮೃತಾ ರಾವ್ ಕೊಂಚಾಡಿ ನಿರ್ವಹಿಸಿದ್ದರು. ಒಬ್ಬೊಬ್ಬರು ಎರಡು ಮೂರು ಪಾತ್ರಗಳನ್ನು ನಿರ್ವಹಿಸಿದ್ದರು. ಭಾಗವತಿಕೆಯನ್ನು ದಿವ್ಯಶ್ರೀ ಪುತ್ತಿಗೆ, ದೀಕ್ಷಾ ಪುತ್ತಿಗೆ, ಮಾನಸ ಪಡುಬಿದ್ರಿ ನಡೆಸಿಕೊಟ್ಟರು.

ಮಂಗಳೂರು : 25 ಮಹಿಳಾ ಕಲಾವಿದರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

ಇದನ್ನೂ ಓದಿ :ಮುಂದಿನ ಎರಡು ವರ್ಷಗಳಲ್ಲಿ ವಿದೇಶಗಳಲ್ಲೂ ಐಐಟಿ ಆರಂಭ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ABOUT THE AUTHOR

...view details