ಪುತ್ತೂರು:ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಗಾಯಗೊಂಡಿದ್ದ ಸ್ಕೂಟಿ ಚಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕುಂಬ್ರ ಕೊಲ್ಲಾಜೆಯಲ್ಲಿ ನಡೆದಿದೆ.
ಕೊಲ್ಲಾಜೆ ಒಳ ರಸ್ತೆಯಿಂದ ಸ್ಕೂಟಿಯಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಬರುತ್ತಿದ್ದ. ಇದೇ ವೇಳೆ, ಎದುರಿಗೆ ಬಂದ ಕಾಲೇಜಿನ ವಿದ್ಯಾರ್ಥಿಯ ಬೈಕ್ ನಡುವೆ ಡಿಕ್ಕಿ ಉಂಟಾಗಿದೆ. ಘಟನೆಯಿಂದ ಇಬ್ಬರು ಸವಾರರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು.