ಕರ್ನಾಟಕ

karnataka

ETV Bharat / state

ಬಿರುಗಾಳಿ ಸಹಿತ ಮಳೆಗೆ ರಬ್ಬರ್, ಅಡಿಕೆ, ತೆಂಗು, ಬಾಳೆ ಮರಗಳು ನೆಲಸಮ : ಲಕ್ಷಾಂತರ ರೂ. ನಷ್ಟ - , coconut, banana trees destroy

ಆಲಂಕಾರು ಗ್ರಾಮದ ಕೊಂಡಾಡಿ ಅವಿನಾಶ್ ಭಟ್‍ಗೆ ಸೇರಿದ ಬಾಳೆ ತೋಟದ ಸುಮಾರು 1,500 ಬಾಳೆ ಗಿಡಗಳು ನೆಲಕ್ಕುರುಳಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಮಳೆ ಗಾಳಿಗೆ ಅಪಾರ ಪ್ರಮಾಣದ ಕೃಷಿ ಬೆಳೆ ಹಾಗೂ ಮನೆಗಳಿಗೆ ಹಾನಿ
ಮಳೆ ಗಾಳಿಗೆ ಅಪಾರ ಪ್ರಮಾಣದ ಕೃಷಿ ಬೆಳೆ ಹಾಗೂ ಮನೆಗಳಿಗೆ ಹಾನಿ

By

Published : May 6, 2020, 8:56 PM IST

ಸುಳ್ಯ:ಮಂಗಳವಾರ ಸಂಜೆ ಬೀಸಿದ ಭಾರೀ ಗಾಳಿ, ಮಳೆಯಿಂದಾಗಿ ಸುಳ್ಯ,ಕಡಬ,ನೆಲ್ಯಾಡಿ, ಉದನೆ, ಸುಬ್ರಹ್ಮಣ್ಯ ಹಾಗೂ ಆಲಂಕಾರು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆಗಳು ಹಾಗೂ ಮನೆಗಳಿಗೆ ಹಾನಿ ಉಂಟಾಗಿದೆ.

ಮಳೆ ಗಾಳಿಗೆ ಅಪಾರ ಪ್ರಮಾಣದ ಕೃಷಿ ಬೆಳೆ ಹಾಗೂ ಮನೆಗಳಿಗೆ ಹಾನಿ

ಸಂಜೆ ವೇಳೆ ಸುಮಾರು ಅರ್ಧ ಗಂಟೆ ಬೀಸಿದ ಗಾಳಿ ಅಪಾರ ಪ್ರಮಾಣದ ಅಡಿಕೆ ಮರ, ತೆಂಗಿನ ಮರ, ಮನೆಯ ಶೀಟ್​​​ಗಳು ಸೇರಿದಂತೆ ವಿದ್ಯುತ್ ಕಂಬಗಳನ್ನೂ ಧರೆಗೆ ಉರುಳಿಸಿದ್ದು, ಇಡೀ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ.

ಬಿರುಗಾಳಿ ಸಹಿತ ಮಳೆಗೆ ನೆಲಕ್ಕುರುಳಿದ ವಿದ್ಯುತ್ ಕಂಬ

ಆಲಂಕಾರು ಗ್ರಾಮದ ಕೊಂಡಾಡಿ ಅವಿನಾಶ್ ಭಟ್‍ಗೆ ಸೇರಿದ ಬಾಳೆ ತೋಟದ ಸುಮಾರು 1,500 ಬಾಳೆ ಗಿಡಗಳು ನೆಲಕ್ಕುರುಳಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಮಳೆ ಗಾಳಿಗೆ ಅಪಾರ ಪ್ರಮಾಣದ ಕೃಷಿ ಬೆಳೆ ಹಾಗೂ ಮನೆಗಳಿಗೆ ಹಾನಿ

ಕಡಬ, ಸುಳ್ಯ, ಉದನೆ, ಸುಬ್ರಹ್ಮಣ್ಯದಲ್ಲಿ ಬಹುತೇಕ ಅಡಿಕೆ ತೋಟದಲ್ಲಿಯೂ ಅಪಾರ ಪ್ರಮಾಣದ ಅಡಿಕೆ ಮರ, ತೆಂಗಿನ ಮರ , ಬಾಳೆ, ರಬ್ಬರ್ ಮರಗಳು ಗಾಳಿಗೆ ಸಿಲುಕಿ ತುಂಡಾಗಿವೆ. ಕಡಬ, ಸುಳ್ಯ, ಮೆಸ್ಕಾಂ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ಸರಬರಾಜು ಕಡಿತಗೊಂಡಿದೆ.

ಬಿರುಗಾಳಿ ಸಹಿತ ಮಳೆಗೆಅಪಾರ ಪ್ರಮಾಣದ ಬೆಳೆಗಳು ಹಾಗೂ ಮನೆಗಳಿಗೆ ಹಾನಿ

ABOUT THE AUTHOR

...view details