ಕರ್ನಾಟಕ

karnataka

ETV Bharat / state

ಕೇರಳದಿಂದ ಈ ಜಿಲ್ಲೆಗೆ ಬರಬೇಕಿದ್ದರೆ ಆರ್​ಟಿಪಿಸಿಆರ್ ನೆಗೆಟಿವ್ ಕಡ್ಡಾಯ; ಜಿಲ್ಲಾಧಿಕಾರಿ - Mangaluru latest news

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ನಡುವೆ ಆರೋಗ್ಯ ಸಂಬಂಧ ವ್ಯವಹಾರಗಳಿರುವುದರಿಂದ ರೋಗಿಗಳ ಸಂಬಂಧಿಕರು, ನೋಡಿಕೊಳ್ಳುವವರು ಜಿಲ್ಲೆಗೆ ಬರುವವರು ಮೊದಲೇ ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತರಬೇಕು..

RT-PCR Negative Is Mandatory In Mangaluru Border
RT-PCR Negative Is Mandatory In Mangaluru Border

By

Published : Jun 28, 2021, 7:19 PM IST

ಮಂಗಳೂರು :ಕೇರಳದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರು ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರುವುದು ಕಡ್ಡಾಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ತಿಳಿಸಿದ್ದಾರೆ. ಗಡಿ ಭಾಗವಾದ ತಲಪಾಡಿಯಲ್ಲಿ ಕೇರಳದಿಂದ ಬರುವ ಪ್ರಯಾಣಿಕರ ಆರ್​ಟಿಪಿಸಿಆರ್ ನೆಗೆಟಿವ್ ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿದರು.

ಇದನ್ನೂ ಓದಿ: ಅಧಿಕ ರಕ್ತದೊತ್ತಡ : ಉಳ್ಳಾಲದಲ್ಲಿ ಸ್ನೇಹಿತರ ಎದುರೇ ಪ್ರಾಣಬಿಟ್ಟ ಯುವಕ!

ಸರ್ಕಾರದ ನಿರ್ದೇಶನದಂತೆ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಿರುವುದರಿಂದ ಆ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕಿಸುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕೇರಳ ಮತ್ತು ದಕ್ಷಿಣ ಕನ್ನಡ ಸಂಪರ್ಕಿಸುವ ತಲಪಾಡಿ, ಸಾರಡ್ಕ, ನೆಟ್ಟಣಿಗೆ ಮುಡ್ನೂರು, ಜಾಲ್ಸೂರು ಮೊದಲಾದೆಡೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 24*7 ಚೆಕ್ ಪೋಸ್ಟ್ ತೆರೆಯಲಾಗಿದೆ.

ಆದುದರಿಂದ ಕೇರಳದಿಂದ ಜಿಲ್ಲೆಗೆ ಪ್ರವೇಶಿಸುವವರು ಆರ್​ಟಿಪಿಸಿಆರ್ ನೆಗೆಟಿವ್ ತರಬೇಕಾಗುತ್ತದೆ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ನಡುವೆ ಆರೋಗ್ಯ ಸಂಬಂಧ ವ್ಯವಹಾರಗಳಿರುವುದರಿಂದ ರೋಗಿಗಳ ಸಂಬಂಧಿಕರು, ನೋಡಿಕೊಳ್ಳುವವರು ಜಿಲ್ಲೆಗೆ ಬರುವವರು ಮೊದಲೇ ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತರಬೇಕು ಎಂದು ತಿಳಿಸಿದರು.

ತಪಾಸಣೆ ಮಾಡುತ್ತಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ

ಇವತ್ತಿನಿಂದಲೇ ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದರೂ ಮೊದಲ ದಿನವಾಗಿರುವುದರಿಂದ ಅಷ್ಟಾಗಿ ಕಟ್ಟುನಿಟ್ಟು ಮಾಡಿಲ್ಲ. ನಾಳೆಯಿಂದ ಕಟ್ಟುನಿಟ್ಟಾಗಿ ಮಾಡಲಾಗುವುದು. ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದವರಿಗೆ ಚೆಕ್ ಪೋಸ್ಟ್ ಬಳಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು. ಕೇರಳದಿಂದ ಜಿಲ್ಲೆಗೆ ಬರುವವರು ಸಹಕರಿಸಬೇಕು ಎಂದರು.

ABOUT THE AUTHOR

...view details