ಪೋಳ್ಯ/ಪುತ್ತೂರು: ಬೈಕ್ ಅಪಘಾತಗೊಂಡು ಆರ್ಎಸ್ಎಸ್ ಮಂಗಳೂರು ವಿಭಾಗ ಗ್ರಾಮವಿಕಾಸ ಪ್ರಮುಖ್ ವೆಂಕಟ್ರಮಣ ಹೊಳ್ಳ ಸಾವನ್ನಪ್ಪಿದ್ದಾರೆ.
ಮೃತ ವೆಂಕಟ್ರಮಣ ಹೊಳ್ಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗ್ರಾಮವಿಕಾಸ ಮಂಗಳೂರು ವಿಭಾಗ ಪ್ರಮುಖ್ ಆಗಿದ್ದು, ಬಂಟ್ವಾಳ ಅಗರ್ತಬೈಲು ನಿವಾಸಿಯಾಗಿದ್ದಾರೆ.

ಮೃತರು ಪುತ್ತೂರು ಪೊಲೀಸ್ ವಸತಿ ನಿಲಯಗಳ ಬಳಿಯ ಪಂಚವಟಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರದಲ್ಲಿ ರಾತ್ರಿ ತಂಗಿದ್ದು, ಇಂದು ಬೆಳಗ್ಗೆ ನಸುಕಿನ ಜಾವ 5 ಗಂಟೆಯ ಸುಮಾರಿಗೆ ಬಂಟ್ವಾಳದ ಮನೆಗೆ ಬೈಕ್ನಲ್ಲಿ ತೆರಳುವ ವೇಳೆ ಪೋಳ್ಯ ಸಮೀಪದ ಪೊಲೀಸ್ ಬ್ಯಾರಿಕೇಡ್ ಬಳಿ ಅಪಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಳ್ಳ ಅವರ ಮೃತದೇಹ, ಅಪಘಾತ ಸ್ಥಳದಿಂದ ತುಸು ದೂರ ಬಿದ್ದಿದ್ದು ಅವರ ತಲೆ ಜಜ್ಜಿ ಹೋಗಿದೆ.
ವೆಂಕಟ್ರಮಣ ಹೊಳ್ಳ ಅವರು ಚಲಾಯಿಸುತ್ತಿದ್ದ ಬೈಕ್ಗೆ ಬೇರೆ ಯಾವುದೋ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ಜರುಗಿರಬಹುದೆಂದು ಶಂಕೆ ವ್ಯಕ್ತವಾಗುತ್ತಿದೆ. ಪುತ್ತೂರು ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.