ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಮುಖಂಡರಿಂದ ರಾಮ ಮಂದಿರಕ್ಕಾಗಿ ನಿಧಿ ಸಂಗ್ರಹಿಸಿದ ಕಲ್ಲಡ್ಕ ಪ್ರಭಾಕರ ಭಟ್ - Kalladka Prabhakar Bhat

ಕಾಂಗ್ರೆಸ್ ನಾಯಕರ ಮನೆಗೆ ಭೇಟಿ ನೀಡಿ ಆರ್​ಎಸ್​ಎಸ್​ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್​ ಭಟ್, ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ನಿಧಿ ಸಂಗ್ರಹ ಮಾಡಿದ್ದಾರೆ.

RSS leader Dr. Kalladka Prabhakar Bhat
ಆರ್​ಎಸ್​ಎಸ್​ ಮುಖಂಡ ಪ್ರಭಾಕರ ಭಟ್

By

Published : Feb 5, 2021, 5:50 PM IST

ಬಂಟ್ವಾಳ: ಆರ್​ಎಸ್​ಎಸ್​ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್​ ಭಟ್, ಕಾಂಗ್ರೆಸ್​ ನಾಯಕರಾದ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ, ಮಾಜಿ ಶಾಸಕ ವಸಂತ ಬಂಗೇರ, ಸುಳ್ಯದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಮುಖಂಡ ಡಾ. ರಘು ಮನೆಗಳಿಗೆ ಭೇಟಿ ನೀಡಿ ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ನಿಧಿ ಸಂಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಕ್ಕೆಂದು ನಾವು ಮನೆ ಮನೆಗೆ ತೆರಳುವ ಭಾಗವಾಗಿ ಕಾಂಗ್ರೆಸ್ ಮುಖಂಡರ ಮನೆಗಳಿಗೂ ತೆರಳಿದ್ದೇವೆ.

ಪಕ್ಷ ಭೇದ ಮರೆತು ರಾಮ ಮಂದಿರಕ್ಕಾಗಿ ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ರಾಮ ಮಂದಿರ ಭಾರತದ ಅಸ್ಮಿತೆಯ ಸಂಕೇತ. ಮಂದಿರ ನಿರ್ಮಾಣ ಸಮಸ್ತ ಹಿಂದು ಬಾಂಧವರ ಸಂಕಲ್ಪವೂ ಹೌದು ಎಂದರು.

ABOUT THE AUTHOR

...view details