ಕರ್ನಾಟಕ

karnataka

ETV Bharat / state

ಆರ್​ಎಸ್ಎಸ್ ಹಿಂದೂ ಸಮಾಜದ ಅತಿ ದೊಡ್ಡ ಶತ್ರು: ಮಹೇಂದ್ರ ಕುಮಾರ್ - mangaluru

ಆರ್​ಎಸ್ಎಸ್ ಮುಸಲ್ಮಾನರಿಗಿಂತ ಹಿಂದೂ ಸಮಾಜದ ಅತೀ ದೊಡ್ಡ ಶತ್ರು. ಹಿಂದೂ ಸಮಾಜದ ಯಾವುದೇ ಪರಿವೆಯೂ ಅವರಿಗಿಲ್ಲ. ಅಮೂಲ್ಯ ಲಿಯೋನ್ ಇತ್ತೀಚೆಗೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಸಂದರ್ಭ ಅತ್ಯಂತ ಸಂಭ್ರಮ ಪಟ್ಟವರು ಆರ್​ಎಸ್ಎಸ್​ನವರು ಎಂದು ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಹೇಳಿದರು.

Mahendra Kumar
ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್

By

Published : Mar 1, 2020, 9:54 PM IST

ಮಂಗಳೂರು:ಆರ್​ಎಸ್ಎಸ್ ಮುಸಲ್ಮಾನರಿಗಿಂತ ಹಿಂದೂ ಸಮಾಜದ ಅತಿ ದೊಡ್ಡ ಶತ್ರು. ಹಿಂದೂ ಸಮಾಜದ ಯಾವುದೇ ಪರಿವೆಯೂ ಅವರಿಗಿಲ್ಲ. ಅಮೂಲ್ಯ ಲಿಯೋನ್ ಇತ್ತೀಚೆಗೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಸಂದರ್ಭ ಅತ್ಯಂತ ಸಂಭ್ರಮ ಪಟ್ಟವರು ಆರ್​ಎಸ್ಎಸ್​ನವರು ಎಂದು ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಹೇಳಿದರು.

ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್

ನಗರದ ಹೊರವಲಯದ ಕುತ್ತಾರ್​ಪದವು ಮದನಿ ನಗರ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿ, ಅಂದು ಅಮೂಲ್ಯ ಲಿಯೋನ್ ವಿರುದ್ಧ ಆರ್​ಎಸ್ಎಸ್ ನವರು ನಡೆಸಿದ ಯಾವ ಪ್ರತಿಭಟನೆಯಲ್ಲಿ ಬೇಸರ ಕಂಡಿಲ್ಲ. ಎನ್​ಆರ್​ಸಿ ಹೋರಾಟದ ವಿರುದ್ಧ ಕಪ್ಪು ಚುಕ್ಕೆ ಅಂಟಿಸಲು ಅತ್ಯಂತ ದೊಡ್ಡ ಆಯುಧ ದೊರಕಿತು ಎಂದು ಸಂಭ್ರಮ ಪಟ್ಟರು. ಪಾಕಿಸ್ತಾನದ ಪರವಾದ ಯಾವುದೇ ವಿಚಾರ ಅವರಿಗೆ ಅತ್ಯಂತ ಖುಷಿ ಕೊಡುವ ವಿಚಾರ ಎಂದು ಹೇಳಿದರು.

ದೆಹಲಿಯಲ್ಲಿ 48 ಮಂದಿಯನ್ನು ಇತ್ತೀಚೆಗೆ ಆಹುತಿ ತೆಗೆದುಕೊಂಡು, ಹಸಿಹಸಿ ರಕ್ತ, ಮಾಂಸದ ರುಚಿ ಸವಿದಿದ್ದಾರೆ. ಅವರನ್ನು ಹತ್ಯೆ ಮಾಡಿದವರಿಗೆ ಅವರು ನಮ್ಮ ತರಹ ಮನುಷ್ಯರೇ ಎಂಬ ಭಾವನೆ ಇಲ್ಲ. ಮತಾಂಧ ಮನಸ್ಥಿತಿಯಿಂದಾಗಿ ಜನರ ಜೀವನವನ್ನು ಬೀದಿಗೆ ತರಲಾಗಿದೆ. ಸಾಮಾನ್ಯ ಕಾರ್ಯಕರ್ತರನ್ನು ಸಮಾಜ ಒಡೆಯಲು ಬಳಸುತ್ತಿದ್ದಾರೆ. ಧರ್ಮ ಧರ್ಮದ ನಡುವೆ ಕಂದಕ ಸೃಷ್ಟಿಸಲು ಅವರನ್ನು ಬಳಸುತ್ತಿದ್ದಾರೆ ಎಂದು ಕಿಡಿಕಾರಿದರು.

ABOUT THE AUTHOR

...view details