ಕರ್ನಾಟಕ

karnataka

ETV Bharat / state

ಎಲ್ಲೆಲ್ಲಿ ಬಂಗಾರ ಇಡ್ತಾರೋ!: ಮಂಗಳೂರು ಏರ್‌ಪೋರ್ಟ್‌ನಲ್ಲಿ 9.6 ಲಕ್ಷ ರೂ ಮೌಲ್ಯದ ಚಿನ್ನ ಪತ್ತೆ - ಮಂಗಳೂರು

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 196 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ರೂ 9.6 ಲಕ್ಷ ಎಂದು ಅಂದಾಜಿಸಲಾಗಿದೆ.

illicit gold found in mangaluru airport
ಮಂಗಳೂರು ಏರ್‌ಪೋರ್ಟ್‌ನಲ್ಲಿ 9.6 ಲಕ್ಷ ಮೌಲ್ಯದ ಚಿನ್ನ ಪತ್ತೆ

By

Published : Apr 24, 2021, 1:43 PM IST

ಮಂಗಳೂರು:ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಕೇರಳದ ಕಾಸರಗೋಡಿನ ಕೂಡ್ಲು ನಿವಾಸಿ ಅಬ್ದುಲ್ ರಹೀಂ ಎರಿಯಾಲ್ ಜಾಫರ್ ಎಂಬಾತ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕ. ಈತ ಶುಕ್ರವಾರ ದುಬೈನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುತ್ತಿದ್ದ. ಈತನ ಬ್ಯಾಗ್ ಪರಿಶೀಲನೆ ಮಾಡಿದಾಗ ಅಡುಗೆ ದಿರಿಸಿನಲ್ಲಿ, ಗ್ಯಾಸ್ ಲೈಟರ್, ಎಂಪಿ3 ಪ್ಲೇಯರ್ ಮತ್ತು ಇಯರ್ ಫೋನ್​ನಲ್ಲಿ ಚಿನ್ನವನ್ನು ಅಡಗಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಈತನಿಂದ 196 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ರೂ 9.6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಂಗಳೂರು ಕಸ್ಟಮ್ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಓದಿ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ: ಮೂರೇ ದಿನಗಳಲ್ಲಿ 1.18 ಕೋಟಿ ಮೌಲ್ಯದ ಚಿನ್ನ ವಶ

ABOUT THE AUTHOR

...view details