ಮಂಗಳೂರು: ನಗರದ ಎಂಆರ್ಪಿಎಲ್ಗೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ 71 ಕೋಟಿ ರೂ ನಷ್ಟವಾಗಿದೆ.
ಎಂಆರ್ಪಿಎಲ್ ಕಾರ್ಯಾಚರಣೆಯ ಈ ಹಣಕಾಸು ವರ್ಷದ ಒಟ್ಟು ವ್ಯವಹಾರ 14,136 ಕೋಟಿ ಆಗಿದೆ. ಕಳೆದ ಹಣಕಾಸು ಸಾಲಿನಲ್ಲಿ ಇದೇ ಅವಧಿಯಲ್ಲಿ 16,745 ಕೋಟಿ ಆಗಿತ್ತು. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ವಹಿವಾಟು ಇಳಿಕೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ (ಮೂರು ತ್ರೈಮಾಸಿಕ ಅವಧಿಯಲ್ಲಿ) ಎಂಆರ್ಪಿಎಲ್ಗೆ ಒಟ್ಟು 555 ಕೋಟಿ ರೂ ನಷ್ಟವುಂಟಾಗಿದೆ.
ಹಿಂದಿನ ನಿರ್ದೇಶಕ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಒಎನ್ಜಿಸಿಯ ಸಹ ಸಂಸ್ಥೆಯಾದ ಒಎಂಪಿಎಲ್ನ 124.66 ಈಕ್ವಿಟಿ ಶೇರುಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರಂತೆ 1216.73 ಕೋಟಿ ಹಣವನ್ನು ಒಎನ್ಜಿಸಿಗೆ ಶೇರು ಖರೀದಿಗಾಗಿ ಪಾವತಿಸಲಾಗಿದೆ.
ಇದನ್ನೂ ಓದಿ:ಮಕ್ಕಳಿಗೆ ಅಗತ್ಯವಿರುವ ನ್ಯುಮೋಕೊಕಲ್ ಕುರಿತು ಬಜೆಟ್ನಲ್ಲಿ ಪ್ರಸ್ತಾಪ: ಲಸಿಕೆಯ ಉಪಯೋಗವೇನು?
ಶೇರು ಖರೀದಿ ಒಪ್ಪಂದದಂತೆ ಒಎನ್ಜಿಸಿಗೂ 124.66 ಕೋಟಿ ಶೇರುಗಳನ್ನು ಒಎಂಪಿಎಲ್ನಿಂದ ಎಂಆರ್ಪಿಎಲ್ಗೆ ವರ್ಗಾಯಿಸಿದ್ದು ಒಎಂಪಿಎಲ್ ನಲ್ಲಿ ಎಂಆರ್ಪಿಎಲ್ ಶೇರು ಶೇಕಡಾ 99.99 ಕ್ಕೆ ಏರಿಕೆಯಾಗಿದೆ.