ಮಂಗಳೂರು:ದರೋಡೆ, ಹಲ್ಲೆ ಹಾಗು ಅಪಘಾತ ಸಹಿತ ಹತ್ತಕ್ಕೂ ಅಧಿಕ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿದ್ದ ಕುಖ್ಯಾತ ದರೋಡೆಕೋರನನ್ನು ಬಂಧಿಸುವಲ್ಲಿ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪಣಂಬೂರು ರೌಡಿ ನಿಗ್ರಹದಳ ಹಾಗೂ ಪಣಂಬೂರು ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಣಂಬೂರು: ಹತ್ತಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ರೌಡಿ ಸೆರೆ - ಪಣಂಬೂರು: ಕುಖ್ಯಾತ ರೌಡಿಯ ಸೆರೆ
ಹತ್ತಕ್ಕೂ ಅಧಿಕ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ದರೋಡೆಕೋರನನ್ನು ಪೊಲೀಸರು ಬಂಧಿಸಿದ್ದಾರೆ.
ಶಮ್ಮಿ ಯಾನೆ ಶಮೀರ್ ಕಾಟಿಪಳ್ಳ (30) ಬಂಧಿತ ಆರೋಪಿ. ಈತ ಪಣಂಬೂರು ಬಂದರು ವ್ಯಾಪ್ತಿಯಲ್ಲಿ ಬರುವ ಲಾರಿ ಚಾಲಕರಿಗೆ ಹಲ್ಲೆಗೈದು ದರೋಡೆ ಮಾಡಿ ಪರಾರಿಯಾಗುತ್ತಿದ್ದ. ಈ ಹಿಂದೆ ಎಎಸ್ಐ ಒಬ್ಬರಿಗೆ ರಾಡ್‌ನಿಂದ ಮಾರಣಾಂತಿಕ ಹಲ್ಲೆಗೈದಿದ್ದ. ಬೆಂಜನ ಪದವಿನಲ್ಲಿ ದ್ವಿಚಕ್ರ ವಾಹನಕ್ಕೆ ತನ್ನ ವಾಹನ ಡಿಕ್ಕಿ ಹೊಡೆಸಿ ಪರಾರಿಯಾದ ಪ್ರಕರಣವೂ ಈತನ ಮೇಲಿತ್ತು. ಹೀಗಾಗಿ ಈತನ ವಿರುದ್ಧ ಹಲವಾರು ಬಾರಿ ಬಂಧನ ವಾರೆಂಟ್ ಜಾರಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ.
ನಿನ್ನೆ ಈತನ ಅಡಗುತಾಣದ ಬಗ್ಗೆ ಸುಳಿವು ಪಡೆದು ದಾಳಿ ನಡೆಸಿದ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ನಡೆದಿದೆ.