ಬಂಟ್ವಾಳ:ಅಪರಾಧದ ಉದ್ದೇಶಕ್ಕೆಂದ ಸಂಚು ರೂಪಿಸಿ ಹೊಂಚುಹಾಕಿ ಕುಳಿತುಕೊಂಡಿದ್ದ ಆರೋಪಿಗಳು ಪೊಲೀಸರನ್ನು ನೋಡಿ ಪರಾರಿಯಾದ ಘಟನೆ ತಾಲೂಕಿನ ಪಾಣೆ ಮಂಗಳೂರು ಸಮೀಪದ ಶಾರದಾ ಹೈಸ್ಕೂಲು ಬಳಿ ಸೋಮವಾರ ನಡೆದಿದೆ.
ಪೊಲೀಸರ ಕಂಡು ಕಾರು ಬಿಟ್ಟು ಎಸ್ಕೇಪ್: ಪರಿಶೀಲನೆ ವೇಳೆ ಕಂಡಿದ್ದು ಲಾಂಗು,ಮಚ್ಚು - Rowdy Sheeter Mustafa
ಹೈಸ್ಕೂಲ್ ಬಳಿ ಬಂಟ್ವಾಳ ನಗರ ಠಾಣಾ ಎಸ್ಐ ಅವಿನಾಶ್ ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದ ವೇಳೆ ಮೂವರು ಕಾರಿನ ಬಳಿ ನಿಂತುಕೊಂಡಿದ್ದು ಪೊಲೀಸರನ್ನು ನೋಡಿ ಅಲ್ಲಿಂದ ಓಡಿಹೋಗಿದ್ದಾರೆ. ಬಳಿಕ ಕಾರನ್ನು ಪರಿಶೀಲಿಸಿದಾಗ ಲಾಂಗು, ಮಚ್ಚು, ದೊಣ್ಣೆಗಳು ಕಂಡುಬಂದಿದೆ.
ಪೊಲೀಸರ ಕಂಡು ಕಾರು ಬಿಟ್ಟು ಎಸ್ಕೇಪ್: ಪರಿಶೀಲನೆ ವೇಳೆ ಕಂಡಿದ್ದು ಲಾಂಗು,ಮಚ್ಚು
ಹೈಸ್ಕೂಲ್ ಬಳಿ ಬಂಟ್ವಾಳ ನಗರ ಠಾಣಾ ಎಸ್ಐ ಅವಿನಾಶ್ ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದ ವೇಳೆ ಮೂವರು ಕಾರಿನ ಬಳಿ ನಿಂತುಕೊಂಡಿದ್ದು ಪೊಲೀಸರನ್ನು ನೋಡಿ ಅಲ್ಲಿಂದ ಓಡಿಹೋಗಿದ್ದಾರೆ.
ಸಂಶಯಗೊಂಡ ಎಸ್ಐ ಕಾರನ್ನು ಪರಿಶೀಲನೆ ನಡೆಸಿದಾಗ ಕಾರಿನೊಳಗೆ ತಲ್ವಾರ್ ಮತ್ತು ದೊಣ್ಣೆಗಳು ಕಂಡುಬಂದವು. ಯಾವುದೋ ಅಪರಾಧವೆಸಗಲು ಸಂಚು ರೂಪಿಸುತ್ತಿರಬಹುದು ಎಂಬ ಸಂಶಯದಿಂದ ಮುಸ್ತಫಾ ಮತ್ತು ತಂಡದ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಬಂಟ್ವಾಳ ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.