ಕರ್ನಾಟಕ

karnataka

ETV Bharat / state

ಉಳ್ಳಾಲ: ಗೋಡೆ ಕೊರೆದು ಲಕ್ಷಾಂತರ ಬೆಲೆಬಾಳುವ ಚಿನ್ನ ದರೋಡೆ - ಉಳ್ಳಾಲದಲ್ಲಿ ಚಿನ್ನದ ಅಂಗಡಿ ಕಳ್ಳತನ

ಕುರ್ನಾಡು ನಿವಾಸಿ ಇಬ್ರಾಹಿಂ ಮಾಲೀಕತ್ವದ ಅಂಗಡಿ ಇದಾಗಿದೆ. ಜ್ಯುವೆಲರಿ ಅಂಗಡಿಯ ಎಡಭಾಗದ ಗೋಡೆ ಕೊರೆದು ಈ ಕೃತ್ಯ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋಡೆ ಕೊರೆದು ಲಕ್ಷಾಂತರ ಬೆಲೆಬಾಳುವ ಚಿನ್ನ ದರೋಡೆ
ಗೋಡೆ ಕೊರೆದು ಲಕ್ಷಾಂತರ ಬೆಲೆಬಾಳುವ ಚಿನ್ನ ದರೋಡೆ

By

Published : Aug 6, 2021, 12:34 PM IST

ಉಳ್ಳಾಲ: ಮುಡಿಪು ಚಿನ್ನದ ಅಂಗಡಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನ ದರೋಡೆ ಮಾಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಾಡು ಬಳಿ ನಡೆದಿದೆ.

ಮುಡಿಪುವಿನಲ್ಲಿರುವ ಗೋಲ್ಡ್ ಕಿಂಗ್ ಜ್ಯುವೆಲರಿಯಲ್ಲಿ ಕಳ್ಳತನ ನಡೆದಿದೆ. ಕುರ್ನಾಡು ನಿವಾಸಿ ಇಬ್ರಾಹಿಂ ಮಾಲೀಕತ್ವದ ಅಂಗಡಿ ಇದಾಗಿದೆ. ಜ್ಯುವೆಲರಿ ಅಂಗಡಿಯ ಎಡಭಾಗದ ಗೋಡೆ ಕೊರೆದು ಈ ಕೃತ್ಯ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ : ನಾಲ್ವರು ಯುವಕರ ವಿವಸ್ತ್ರಗೊಳಿಸಿ ಖಾಸಗಿ ಭಾಗಕ್ಕೆ ಪೆಟ್ರೋಲ್​ ಸುರಿದು ಅಮಾನವೀಯತೆ

ABOUT THE AUTHOR

...view details