ಮಂಗಳೂರು:ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದರೋಡೆ ಮಾಡುತ್ತಿರುವ ಗ್ಯಾಂಗ್ನ 9 ಮಂದಿಯನ್ನು ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರಾಜ್ಯದ ವಿವಿಧೆಡೆ ದರೋಡೆ ಮಾಡುತ್ತಿದ್ದ ಗ್ಯಾಂಗ್: ಮಂಗಳೂರಲ್ಲಿ 9 ಮಂದಿ ಅಂದರ್ ಅಬ್ದುಲ್ ರವೂಫ್ (24), ರಾಮಮೂರ್ತಿ (23) ಅಶ್ರಫ್ ಪೆರಾಡಿ (27), ಸಂತೋಷ್ (24), ನವೀದ್ (36), ರಮಾನಂದ ಎನ್ ಶೆಟ್ಟಿ (48), ಸುಮನ್ (24), ಸಿದ್ದಿಕ್ (27), ಆಲಿಕೋಯ ಬಂಧಿತ ಆರೋಪಿಗಳು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಬಜ್ಪೆ, ಮುಲ್ಕಿಯಲ್ಲಿ ಇತ್ತೀಚೆಗೆ ಸರಣಿ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ದರೋಡೆ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ರಾಜ್ಯದ ವಿವಿಧೆಡೆ ಇದೇ ರೀತಿಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಸೆರೆ ಸಿಕ್ಕಿದೆ.
ಆರೋಪಿಗಳು ಮಾ. 27 ರಿಂದ 31ವರೆಗೆ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮುಲ್ಕಿ ಮತ್ತು ಬಜ್ಪೆಯಲ್ಲಿ ತಲಾ 2, ಮೂಡಬಿದಿರೆಯಲ್ಲಿ 4 ದರೋಡೆ ಪ್ರಕರಣ ನಡೆಸಿದ್ದರು. ಅಲ್ಲದೇ ಇವರು ಹಾಸನ, ಮೈಸೂರು, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಿವಿಧ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗ್ತಿದೆ.
5 ರಿಂದ 10 ಮಂದಿ ಇರುವ ಮೂರ್ನಾಲ್ಕು ತಂಡಗಳಲ್ಲಿ ಇವರು ದರೋಡೆ ಕೃತ್ಯಗಳನ್ನು ನಡೆಸುತ್ತಿದ್ದು, ಇನ್ನೂ 20 ಕ್ಕೂ ಹೆಚ್ಚು ಆರೋಪಿಗಳ ಶೋಧಕಾರ್ಯವನ್ನು ಪೊಲಿಸರು ನಡೆಸುತ್ತಿದ್ದಾರೆ.