ಮಂಗಳೂರು: ಕಾರಿನ ಗಾಜು ಒಡೆದು ನಾಳೆ ದುಬೈಗೆ ತೆರಳಬೇಕಿದ್ದ ದಂಪತಿಯ ಪಾಸ್ಪೋರ್ಟ್, ವೀಸಾ, ವಿಮಾನದ ಟಿಕೆಟ್ ಸಹಿತ ಚಿನ್ನಾಭರಣ ಕಳವುಗೈದ ಘಟನೆ ಉರ್ವ ಚಿಲಿಂಬಿ ಶಿರಡಿ ಸಾಯಿ ಬಾಬಾ ಮಂದಿರದ ಬಳಿ ನಡೆದಿದೆ.
ದುಬೈಗೆ ತೆರಳಬೇಕಿದ್ದ ದಂಪತಿಯ ಕಾರಿನ ಗಾಜು ಒಡೆದು ಕಳ್ಳತನ - ಕಾರಿನ ಗಾಜು ಒಡೆದು ಕಳ್ಳತಯನ
ಮಂಗಳೂರಿನ ಉರ್ವದ ಶಿರಡಿ ಸಾಯಿ ಬಾಬ ಮಂದಿರ ಮುಂಭಾಗದಲ್ಲಿ ಕಾರು ನಿಲ್ಲಿಸಿ ದಂಪತಿ ಮಂದಿರಕ್ಕೆ ತೆರಳಿದ್ದರು. ಈ ಸಂದರ್ಭ ಕಳ್ಳರಿಬ್ಬರು ಬಂದು ಕಾರಿನ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಪಾಸ್ಪೋರ್ಟ್, ಆಧಾರ್ ಕಾರ್ಡ್, ಎಟಿಎಮ್ ಕಾರ್ಡ್, 1 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ.

ಮಂಗಳೂರಿನ ಉರ್ವದ ಶಿರಡಿ ಸಾಯಿ ಬಾಬ ಮಂದಿರ ಮುಂಭಾಗದಲ್ಲಿ ಕಾರು ನಿಲ್ಲಿಸಿ ದಂಪತಿ ಮಂದಿರಕ್ಕೆ ತೆರಳಿದ್ದರು. ಈ ಸಂದರ್ಭ ಕಳ್ಳರಿಬ್ಬರು ಬಂದು ಕಾರಿನ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಪಾಸ್ಪೋರ್ಟ್, ಆಧಾರ್ ಕಾರ್ಡ್, ಎಟಿಎಮ್ ಕಾರ್ಡ್, 1 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಕಳ್ಳರು ಕದ್ದು ಪರಾರಿಯಾಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ದಂಪತಿ ನಾಳೆ ಬೆಳಗ್ಗೆ 6.40ಕ್ಕೆ ದುಬೈಗೆ ತೆರೆಳಬೇಕಾಗಿತ್ತು, ಆದರೆ ಇದೀಗ ಪಾಸ್ಪೋರ್ಟ್, ವೀಸಾ, ವಿಮಾನ ಟಿಕೆಟ್ ಕಳೆದುಕೊಂಡಿದ್ದು, ಆತಂಕಕ್ಕೆ ಒಳಗಾಗಿದ್ದಾರೆ. ಈ ಘಟನೆ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.