ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಮೊತ್ತೊಬ್ಬ ದರೋಡೆಕೋರನ ಬಂಧನ - ಮಂಗಳೂರು

ಮಂಗಳೂರಿನ ಮಳಲಿಯಲ್ಲಿ ಸಣ್ಣ ಫೈನಾನ್ಸಿಯರೊಬ್ಬರನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಉಳಾಯಿಬೆಟ್ಟು ಸಮೀಪದಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಮೊತ್ತೊಬ್ಬ ದರೋಡೆಕೋರನ ಬಂಧನ

By

Published : Jul 23, 2019, 2:36 PM IST

ಮಂಗಳೂರು: ಮಂಗಳೂರಿನ ಮಳಲಿಯಲ್ಲಿ ಸಣ್ಣ ಫೈನಾನ್ಸಿಯರೊಬ್ಬರನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಉಳಾಯಿಬೆಟ್ಟು ಸಮೀಪದಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಉಳಾಯಿಬೆಟ್ಟು ನಿವಾಸಿ, ರೌಡಿಶೀಟರ್ ಮಹಮ್ಮದ್ ಖಾಲಿದ್ ಯಾನೆ ಕೊಯ (32) ಬಂಧಿತ ಆರೋಪಿ. ದರೊಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಳಾಯಿಬೆಟ್ಟು ಪಟ್ರಕೋಡಿ ನಿವಾಸಿ ಆಶ್ಲೇಷ್(20), ಮುಳೂರು ಗ್ರಾಮ ಕಿನ್ನಿಕಂಬ್ಲ ಮಠದಗುಡ್ಡೆ ನಿವಾಸಿ ಅಬ್ದುಲ್ ಅಜೀಜ್​​19), ಗಂಜಿಮಠ ನಾರ್ಲಪದವು ನಿವಾಸಿ ಮುಹಮ್ಮದ್ ಮುಸ್ತಫಾ(23) ಎಂಬುವರನ್ನು ಬಂಧಿಸಲಾಗಿದ್ದು ಇವರುಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸೆಂಥಿಲ್‌ಕುಮಾರ್ ಎಂಬವರು ಸಣ್ಣ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದು, ಪ್ರತಿ ಭಾನುವಾರ ಕಲೆಕ್ಷನ್ ಮಾಡುತ್ತಿದ್ದರು. ಜು.14ರಂದು ಬೆಳಗ್ಗೆ 10 ಗಂಟೆಯಲ್ಗೆಲಿ ಪೊಳಲಿ ಅಡ್ಡೂರಿನಿಂದ ಮರಳು ಯಾರ್ಡ್ ರಸ್ತೆಯಲ್ಲಿ ಮಳಲಿಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಯುವಕರು ಬೆದರಿಸಿ ಬೈಕ್​​ನಲ್ಲಿದ್ದ ಬಾಕ್ಸ್​​ ಒಡೆದು ಅದರಲ್ಲಿದ್ದ 2.05 ಲಕ್ಷ ರೂ. ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಡೋಡೆ ಪ್ರಕರಣದ ಪ್ರಮುಖ ರೂವಾರಿ ಗಡಿಪಾರುಗೊಂಡ ಕುಖ್ಯಾತ ಆರೋಪಿ ರೌಡಿಶೀಟರ್ ಮುಹಮ್ಮದ್ ಖಾಲಿದ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಆರೋಪಿ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ಕು ಕೊಲೆಯತ್ನ ಪ್ರಕರಣ ಸೇರಿದಂತೆ ಒಟ್ಟು ಒಂಭತ್ತು ಪ್ರಕರಣ ದಾಖಲಾಗಿವೆ.

ಆರೋಪಿ ಗಡಿಪಾರುಗೊಂಡಿದ್ದರೂ ತಲೆಮರೆಸಿಕೊಂಡು ಇತರ ಸಹಚರರೊಂದಿಗೆ ಸೇರಿ ಮಳಲಿಯಲ್ಲಿ ಫೈನಾನ್ಸರ್‌ನನ್ನು ದರೋಡೆ ಮಾಡಿದ್ದ. ಈತನನ್ನು ಸೋಮವಾರ ಬೆಳಗ್ಗೆ ಉಳಾಯಿಬೆಟ್ಟು ಬಳಿ ಬಂಧಿಸಲಾಗಿದೆ. ಆರೋಪಿಯಿಂದ 50 ಸಾವಿರ ರೂ. ನಗದು, ಎರಡು ಮೊಬೈಲ್ ಫೋನ್, ತಲ್ವಾರ್​, ಚೂರಿಗಳನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details