ಮಂಗಳೂರು:ರಸ್ತೆ ಕಾಮಗಾರಿಯ ಶಿಲಾಬರಹದ ಕಲ್ಲನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದಿರುವ ಘಟನೆ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದಲ್ಲಿ ನಡೆದಿದೆ.
2017ರಲ್ಲಿ ಮಾಜಿ ಸಚಿವ ರಮಾನಾಥ ರೈ ಅವರು ರಾಯಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೇರಿ-ಮಾನಡ್ಕ ಗಿರಿಜನ ರಸ್ತೆಯ ಕಾಮಗಾರಿ ನಡೆಸಲು 10 ಲಕ್ಷ ರೂ. ಮಂಜೂರು ಮಾಡಿ, ರಸ್ತೆ ಕಾಮಗಾರಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶಿಲಾಬರಹದ ಕಲ್ಲು ಸ್ಥಾಪಿಸಲಾಗಿತ್ತು. ಆದರೆ ಗುರುವಾರ ಯಾರೋ ಈ ಶಿಲಾಬರಹದ ಕಲ್ಲನ್ನು ಧ್ವಂಸಗೈದಿದ್ದಾರೆ.