ಗುಂಡ್ಯ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು ಗುಂಡ್ಯ ವಾಹನ ತಪಾಸಣಾ ಕೇಂದ್ರದಲ್ಲಿ ಸುಮಾರು 150 ಕ್ಕೂ ಹೆಚ್ಚು ಚಾಲಕರು, ಕ್ಲೀನರ್ಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೋಣಿಗಲ್ನಲ್ಲಿ ರಸ್ತೆ ಕುಸಿತ: ಗುಂಡ್ಯ ಚೆಕ್ ಪೋಸ್ಟ್ನಲ್ಲಿ ಘನ ವಾಹನ ಚಾಲಕರ ಪರದಾಟ - ಗುಂಡ್ಯ ವಾಹನ ತಪಾಸಣಾ ಕೇಂದ್ರ
ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ ಉಂಟಾಗಿದ್ದು ಗುಂಡ್ಯ ವಾಹನ ತಪಾಸಣಾ ಕೇಂದ್ರದಲ್ಲಿ ಮೂರು ದಿನಗಳಿಂದ ಸುಮಾರು 80 ಕ್ಕೂ ಅಧಿಕ ಘನ ವಾಹನಗಳು ನಿಂತಿವೆ.
ಗುಂಡ್ಯ ಚೆಕ್ ಪೋಸ್ಟ್
ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಗುಂಡ್ಯ ವಾಹನ ತಪಾಸಣಾ ಕೇಂದ್ರದಲ್ಲಿ ಮೂರು ದಿನಗಳಿಂದ ಸುಮಾರು 80 ಕ್ಕೂ ಅಧಿಕ ಘನ ವಾಹನಗಳು ನಿಂತಿವೆ. ಸ್ಥಳದಲ್ಲಿ ಸುಮಾರು 150ಕ್ಕೂ ಹೆಚ್ಚು ವಾಹನ ಚಾಲಕರು, ಕ್ಲೀನರ್ಗಳು ಬೀಡುಬಿಟ್ಟಿದ್ದು, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ವಿಷಯ ತಿಳಿದು ಸ್ಥಳಕ್ಕೆ ಕಡಬ ತಹಶೀಲ್ದಾರ್ ಅನಂತಶಂಕರ್, ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಚಾಲಕರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ, ಚಾಲಕರು ಕೂಡಲೇ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
Last Updated : Aug 20, 2021, 11:01 AM IST