ಕರ್ನಾಟಕ

karnataka

ETV Bharat / state

ತಾಯಿ ಮುಂದೆಯೇ ಬಾಲಕನಿಗೆ ಟ್ಯಾಂಕರ್ ಡಿಕ್ಕಿ: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಉಳ್ಳಾಲದಲ್ಲಿ ಮಗು ಮೇಲೆ ಹರಿದ ಟ್ಯಾಂಕರ್

ತೊಕ್ಕೊಟ್ಟು ಬಳಿಯ ಉಳ್ಳಾಲಬೈಲಿನಲ್ಲಿ ಸೋಮವಾರ ಸಂಜೆ ರಸ್ತೆ ದಾಟುವ ಸಂದರ್ಭದಲ್ಲಿ 5 ವರ್ಷದ ಬಾಲಕನ ಮೇಲೆ ಟ್ಯಾಂಕರ್ ಹರಿದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

Road accident serious injury to 5 year old child in Ullal taluk
ಉಳ್ಳಾಲದಲ್ಲಿ ಮಗು ಮೇಲೆ ಹರಿದ ಟ್ಯಾಂಕರ್

By

Published : Dec 1, 2020, 1:34 PM IST

Updated : Dec 1, 2020, 2:12 PM IST

ಉಳ್ಳಾಲ: ಟ್ಯಾಂಕರ್ ಡಿಕ್ಕಿ ಹೊಡೆದು 5 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಬಳಿಯ ಉಳ್ಳಾಲಬೈಲಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಗಾಯಾಳು ಬಾಲಕನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕನ ಮೇಲೆ ಹರಿದ ಟ್ಯಾಂಕರ್

ಕೃಷ್ಣ (5) ಗಾಯಾಳು. ಉತ್ತರಪ್ರದೇಶ ಮೂಲದ ದಂಪತಿ ಪುತ್ರನಾಗಿರುವ ಬಾಲಕ ಹೆತ್ತವರ ಜತೆಗೆ ರಸ್ತೆ ದಾಟುವ ಸಂದರ್ಭ ತೊಕ್ಕೊಟ್ಟು ಕಡೆಯಿಂದ ಉಳ್ಳಾಲದತ್ತ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕನ ಹೊಟ್ಟೆ ಹಾಗೂ ಕೈ ಮೇಲೆ ಟ್ಯಾಂಕರ್ ಹರಿದಿರುವುದರಿಂದ ಆತನ ಸ್ಥಿತಿ ಗಂಭೀರವಾಗಿದೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಓದಿ:ಕೋಲಾರ: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಯುವಕರು ದುರ್ಮರಣ

ಹೆತ್ತವರ ಕಣ್ಮುಂದೆಯೇ ಅಪಘಾತ: ಮಗು ಜತೆಗೆ ತಾಯಿ ಹಾಗೂ ಸಂಬಂಧಿಕರು ನಡೆದುಕೊಂಡು ಬರುವ ಸಂದರ್ಭವೇ ಅಪಘಾತ ಸಂಭವಿಸಿದೆ. ಹೆತ್ತವರ ಕಣ್ಮುಂದೆಯೇ ಅಪಘಾತ ಸಂಭವಿಸಿದ್ದು, ಬಾಲಕನ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯರು ಬಾಲಕನಿಗೆ ನೀರು ಕುಡಿಸಿದ ಬಳಿಕ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.

Last Updated : Dec 1, 2020, 2:12 PM IST

ABOUT THE AUTHOR

...view details