ಉಳ್ಳಾಲ:ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಸೇತುವೆ ಬಳಿ ನಡೆದಿದೆ.
ಉಳ್ಳಾಲದಲ್ಲಿ ಸ್ಕೂಟರ್ಗೆ ಕಾರು ಡಿಕ್ಕಿ: ಓರ್ವ ಸಾವು, ಮತ್ತೊಬ್ಬ ಗಂಭೀರ - ಉಳ್ಳಾಲ ಕ್ರೈಮ್ ಲೆಟೆಸ್ಟ್ ನ್ಯೂಸ್
ಉಳ್ಳಾಲದ ತೊಕ್ಕೊಟ್ಟು ಸೇತುವೆ ಬಳಿ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ನಡೆದಿದೆ.
ಸುಬೇದ್ (28) ಸಾವನ್ನಪ್ಪಿರುವ ಸ್ಕೂಟರ್ ಸವಾರ. ಇವರು ಉಳ್ಳಾಲ ಬಂಡಿಕೊಟ್ಯ ನಿವಾಸಿಯಾಗಿದ್ದಾರೆ. ಚೆಂಬುಗುಡ್ಡೆ ಮಹಮ್ಮದ್ ಶಾಕೀರ್ (18) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಉರುಳಿ ರಸ್ತೆ ಮೇಲೆ ಬಿದ್ದಿದ್ದು, ಸುಬೇದ್ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತಕ್ಕೆ ಕಾರಣರಾದ ಕಾರು ಸವಾರ ಸೋಮೇಶ್ವರ ಪುರಸಭೆ ವ್ಯವಸ್ಥಾಪಕ ಕೃಷ್ಣ ಹಾಗೂ ಲಾರಿ ಸವಾರ ಕಾರ್ಕಳದ ಸುರೇಂದ್ರ ಎಂಬಾತನನ್ನು ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.