ಕರ್ನಾಟಕ

karnataka

ETV Bharat / state

ಪುತ್ತೂರಿನ ಮುಕ್ರುಂಪ್ಪಾಡಿಯಲ್ಲಿ ಸರಣಿ ಅಪಘಾತ: ಕೆಎಸ್ಆರ್​ಟಿಸಿ ಬಸ್​ ಚಾಲಕ ಸಾವು - ಪುತ್ತೂರಿನ ಮುಕ್ರುಂಪ್ಪಾಡಿಯಲ್ಲಿ ಸರಣಿ ಅಪಘಾತ

ಮುಕ್ರುಂಪ್ಪಾಡಿ ಸಂತೋಮ್ ಗುರು ಮಂದಿರದ ಬಳಿ ಸರಣಿ ಅಪಘಾತವಾಗಿದ್ದು, ಕೆಎಸ್ಆರ್​ಟಿಸಿ ಚಾಲಕ ಸಾವನ್ನಪ್ಪಿದ್ದಾರೆ.

ಕೆಎಸ್ಆರ್​ಟಿಸಿ ಚಾಲಕ ಸಾವು
KSRTC driver died in accident

By

Published : Jan 8, 2020, 10:58 PM IST

ಪುತ್ತೂರು:ಮಾಣಿ ಮೈಸೂರು ರಾಜ್ಯ ಹೆದ್ದಾರಿ ಮುಕ್ರುಂಪ್ಪಾಡಿ ಸಂತೋಮ್ ಗುರು ಮಂದಿರದ ಬಳಿ ನಡೆದ ಸರಣಿ ಅಪಘಾತದಲ್ಲಿ ಕೆಎಸ್​ಆರ್​ಟಿಸಿ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪುತ್ತೂರಿನ ಮುಕ್ರುಂಪ್ಪಾಡಿಯಲ್ಲಿ ಸರಣಿ ಅಪಘಾತದಲ್ಲಿ ಚಾಲಕ ಸಾವು

ಭಕ್ತಕೋಡಿ ನಿವಾಸಿ ಮೋನಪ್ಪ (59) ಮೃತ ಕೆಎಸ್ಆರ್​ಟಿಸಿ ಚಾಲಕ.

ಸುಳ್ಯ ಕಡೆಯಿಂದ ಬರುತ್ತಿದ್ದ ಕಾರು ಮುಕ್ರುಂಪ್ಪಾಡಿ ಸಂತೋಮ್ ಗುರು ಮಂದಿರದ ಬಳಿ ಎದುರಿನಿಂದ ಬರುತ್ತಿದ್ದ ಸ್ಕೂಟಿ ಮತ್ತು ಅದರ ಹಿಂದಿನಿಂದ ಬರುತ್ತಿದ್ದ ಆಟೋಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಸವಾರ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಈ ಘಟನೆಯಲ್ಲಿ ಆಟೋ ಚಾಲಕ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details