ಬಂಟ್ವಾಳ :ಕಾರು ಮತ್ತು ಆಟೋ ನಡುವೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ತಾಲೂಕಿನ ಕಲ್ಲಡ್ಕ ಸಮೀಪ ಸುಬ್ಬಕೋಡಿ ಬಳಿ ನಡೆದಿದೆ.
ಬಂಟ್ವಾಳದಲ್ಲಿ ಕಾರು ಮತ್ತು ಆಟೋ ಡಿಕ್ಕಿ : ಮಹಿಳೆ ದುರ್ಮರಣ - ಬಂಟ್ವಾಳದಲ್ಲಿ ಕಾರು ಮತ್ತು ಆಟೋ ಡಿಕ್ಕಿ ಆಟೋದಲ್ಲಿದ್ದ ಮಹಿಳೆ ಸಾವು
ಎರಡೂ ವಾಹನಗಳು ಜಖಂಗೊಂಡಿವೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಬಂಟ್ವಾಳದಲ್ಲಿ ಕಾರು ಮತ್ತು ಆಟೋ ಡಿಕ್ಕಿ
ಕಲ್ಲಡ್ಕ ಮುರಬೈಲು ನಿವಾಸಿ ದೇವಕಿ (70) ಎಂಬುವರು ಸಾವನ್ನಪ್ಪಿದ ಮಹಿಳೆ. ಘಟನೆಯಲ್ಲಿ ಆಟೋ ಚಾಲಕ ಭೋಜ ಮೂಲ್ಯ ಗಾಯಗೊಂಡಿದ್ದಾರೆ. ಕಾರು ಮತ್ತು ಆಟೋ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತವಾಗಿದೆ.
ಎರಡೂ ವಾಹನಗಳು ಜಖಂಗೊಂಡಿವೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.