ETV Bharat Karnataka

ಕರ್ನಾಟಕ

karnataka

ETV Bharat / state

ಉಳ್ಳಾಲ : ಅಪರಿಚಿತ ವಾಹನ ಡಿಕ್ಕಿ.. ಫ್ಲೈಓವರ್‌ನಿಂದ ಕೆಳಗೆ ಬಿದ್ದು ಬೈಕ್​​​ ಸವಾರ ಸಾವು.. - ಉಳ್ಳಾಲದಲ್ಲಿ ಬೈಕ್​​​ ಸವಾರ ಸಾವು

ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..

ಫ್ಲೈಓವರ್​​ ನಿಂದ ಕೆಳಗೆಬಿದ್ದ ಬೈಕ್​​​ ಸವಾರ ಸಾವು
ಫ್ಲೈಓವರ್​​ ನಿಂದ ಕೆಳಗೆಬಿದ್ದ ಬೈಕ್​​​ ಸವಾರ ಸಾವು
author img

By

Published : Oct 27, 2021, 6:46 PM IST

ಉಳ್ಳಾಲ :ಫ್ಲೈಓವರ್‌ನಿಂದ ಕೆಳಗೆ ಬಿದ್ದು ಬುಲೆಟ್ ಸವಾರ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ. ಕುಂಪಲ ನಿವಾಸಿ ಸುಬ್ರಹ್ಮಣ್ಯ (50) ಸಾವನ್ನಪ್ಪಿದವರು.

ಮಂಗಳೂರು ಕಡೆಯಿಂದ ಕುಂಪಲ ಕಡೆಗೆ ಬುಲೆಟ್ ವಾಹನದಲ್ಲಿ ಬರುವ ಸಂದರ್ಭ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬುಲೆಟ್ ಫ್ಲೈಓವರ್​​ಗೆ ಡಿಕ್ಕಿ ಹೊಡೆದಿದ್ದು, ಸವಾರ ಸೇತುವೆಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು.

ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

author-img

...view details