ಕರ್ನಾಟಕ

karnataka

ETV Bharat / state

ಹಿಟ್ ಆ್ಯಂಡ್ ರನ್ : ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ - ನೆಲ್ಯಾಡಿಯಲ್ಲಿ ರಸ್ತೆ ಅಪಘಾತ ಓರ್ವ ಸಾವು ಮತ್ತೋರ್ವನ ಸ್ಥಿತಿ ಗಂಭೀರ

ತಕ್ಷಣವೇ ಮಾಹಿತಿ ಪಡೆದ ನೆಲ್ಯಾಡಿ ಹೊರ ಠಾಣೆ ಪೊಲೀಸ್ ಸಿಬ್ಬಂದಿಗಳಾದ ಯೋಗರಾಜ್ ಮತ್ತು ಬಾಲಕೃಷ್ಣ ಎಂಬುವರು ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕೆಎಸ್​​ಆರ್​​ಟಿಸಿ ಬಸ್‌ನ ಚಾಲಕನನ್ನ ಗುಂಡ್ಯ ಸಮೀಪ ಪತ್ತೆ ಹಚ್ಚಿ, ವಶಕ್ಕೆ ಪಡೆದಿದಾರೆ..

ಹಿಟ್ ಆ್ಯಂಡ್ ರನ್
ಹಿಟ್ ಆ್ಯಂಡ್ ರನ್

By

Published : Jul 16, 2021, 7:06 PM IST

ನೆಲ್ಯಾಡಿ : ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಸಮೀಪದ ಲಾವತ್ತಡ್ಕ ಎಂಬಲ್ಲಿ ನಡೆದಿದೆ.

ಗುಂಡ್ಯ ಕಡೆಯಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ವಿರುದ್ಧ ದಿಕ್ಕಿನಿಂದ ಆಗಮಿಸಿದ ಬಸ್ ಲಾವತ್ತಡ್ಕ ಸಮೀಪ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ಮೇಲೆ ಚಾಲಕ ಬಸ್‌ನ ನಿಲ್ಲಿಸದೇ ಪರಾರಿಯಾಗಿದಾನೆ.

ತಕ್ಷಣವೇ ಮಾಹಿತಿ ಪಡೆದ ನೆಲ್ಯಾಡಿ ಹೊರ ಠಾಣೆ ಪೊಲೀಸ್ ಸಿಬ್ಬಂದಿಗಳಾದ ಯೋಗರಾಜ್ ಮತ್ತು ಬಾಲಕೃಷ್ಣ ಎಂಬುವರು ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕೆಎಸ್​​ಆರ್​​ಟಿಸಿ ಬಸ್‌ನ ಚಾಲಕನನ್ನ ಗುಂಡ್ಯ ಸಮೀಪ ಪತ್ತೆ ಹಚ್ಚಿ, ವಶಕ್ಕೆ ಪಡೆದಿದಾರೆ.

ಇದನ್ನೂ ಓದಿ : 'ಸರ್ವಿಸ್‌ ತಡವಾಗಿದ್ದಕ್ಕೆ ದರ್ಶನ್‌ ಕೋಪಗೊಂಡಿದ್ದರು, ಆದ್ರೆ ಯಾರ ಮೇಲೂ ಹಲ್ಲೆ ಮಾಡಿಲ್ಲ'

ABOUT THE AUTHOR

...view details