ಭಟ್ಕಳ: ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ಆರ್.ಎನ್.ಎಸ್.ಟ್ರಸ್ಟ್ ಅಧ್ಯಕ್ಷ ಡಾ.ಆರ್.ಎನ್.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ - ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ
ಮುರ್ಡೇಶ್ವರದಲ್ಲಿರುವ ತಮ್ಮದೇ ಆರ್.ಎನ್.ಎಸ್ ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಕೂಡಾ ಉಚಿತ ತಪಾಸಣೆ ಮಾಡಲು ತೀರ್ಮಾನಿಸಿದ್ದು, ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯರೂ ಲಭ್ಯರಿರುತ್ತಾರೆ ಎಂದು ಡಾ. ಆರ್. ಎನ್. ಶೆಟ್ಟಿ ತಿಳಿಸಿದ್ದಾರೆ.
ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ
ಜನರು ಕೊರೊನಾ ವೈರಸ್‍ನಿಂದ ಆಗಿರುವ ಲಾಕ್‍ಡೌನ್‍ನಿಂದಾಗಿ ತೀವ್ರ ತೊಂದರೆಯಲ್ಲಿದ್ದಾರೆ. ತಮ್ಮ ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಉಚಿತ ತಪಾಸಣೆ ಮಾಡಲು ತೀರ್ಮಾನಿಸಿದ್ದು, ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯರೂ ಲಭ್ಯವಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಭಟ್ಕಳದ ಜನತೆ ತಮ್ಮ ಆರೋಗ್ಯ ಸಮಸ್ಯೆಗಾಗಿ ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಗೆ ಬಂದು ತಪಾಸಣೆ ಚಿಕಿತ್ಸೆ ಪಡೆಯಬಹುದು ಎಂದೂ ತಿಳಿಸಲಾಗಿದೆ.