ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ಶಾಲಾ ಮಕ್ಕಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ.. ಪೋಷಕರಿಂದ ವಿದ್ಯಾರ್ಥಿಗೆ ಥಳಿತ - ಪೋಷಕರಿಂದ ವಿದ್ಯಾರ್ಥಿಗೆ ಥಳಿತ

ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳವಾಗಿರುವ ಘಟನೆ ನಡೆದಿದೆ.

Office of Commissioner of Police Mangalore City
ಪೋಲಿಸ್ ಆಯುಕ್ತರ ಕಛೇರಿ ಮಂಗಳೂರು ನಗರ

By

Published : Nov 9, 2022, 1:28 PM IST

ಮಂಗಳೂರು:ನಗರ ಹೊರವಲಯದ ಅಡ್ಯಾರ್ ಕಟ್ಟೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ಈ ನಡುವೆ ಪೋಷಕರು ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಪ್ರಕರಣ ಹಿನ್ನೆಲೆ.. ನವೆಂಬರ್ 5 ರಂದು ವಿದ್ಯಾರ್ಥಿಗಳು ಶಾಲೆ ಮುಗಿದ ಬಳಿಕ ಬಂಟ್ವಾಳಕ್ಕೆ ಹೋಗುವ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ. ಈ ವಿಷಯ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ನವೆಂಬರ್ 7 ರಂದು ತಿಳಿದಿದೆ. ಆಗ ಆಡಳಿತ ಮಂಡಳಿಯವರು ಪೋಷಕರನ್ನು ಕರೆಸಿ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಆದರೆ ನಿನ್ನೆ ಓರ್ವ ವಿದ್ಯಾರ್ಥಿಯ ತಾಯಿ ಶಮೀಮಾ ಮತ್ತು ಆತನ ಸಂಬಂಧಿ ಜಾಜಿಲ್ ಎಂಬವರು ಮತ್ತೋರ್ವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆ ನಡೆಸಿರುವ ಆರೋಪಿಗಳಾದ ವಿದ್ಯಾರ್ಥಿಯ ತಾಯಿ ಹಾಗೂ ಸಂಬಂಧಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಉಳ್ಳಾಲದಲ್ಲಿ ಮರಳು ದಂಧೆಕೋರರ ಕಳ್ಳಮಾರ್ಗ.. ಮತ್ತೆ ಸಿಸಿಟಿವಿ ಕೆಡವಲು ಯತ್ನ

ABOUT THE AUTHOR

...view details