ಪುತ್ತೂರು: ಲಾಕ್ಡೌನ್ ಹಿನ್ನೆಲೆ ಪುತ್ತೂರು ಎಪಿಎಂಸಿ ವತಿಯಿಂದ ಬಡವರಿಗೆ ಅಕ್ಕಿ-ಹಾಲು ವಿತರಣೆ ಮಾಡಲಾಯಿತು. ಶಾಸಕ ಸಂಜೀವ್ ಮಠಂದೂರು ಚಾಲನೆ ನೀಡಿದರು.
ಎಪಿಎಂಸಿ ವತಿಯಿಂದ ಪುತ್ತೂರಿನಲ್ಲಿ ಅಕ್ಕಿ-ಹಾಲು ವಿತರಣೆ
ಮಂಗಳೂರಿನ ಪ್ರಕಾಶ್ ಶೆಟ್ಟಿ ಬಂಜಾರ ಅವರು ನೀಡಿದ ದಿನಸಿ ಪದಾರ್ಥಗಳುಳ್ಳ ಕಿಟ್ಗಳನ್ನು ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ನೀಡಲಾಯಿತು.
ಪಡಿತರ ವಿತರಣೆ
ಪುತ್ತೂರು ನಗರಸಭೆಯಲ್ಲಿ 51 ಪೌರಕಾರ್ಮಿಕರು ದುಡಿಯುತ್ತಿದ್ದಾರೆ. ಇದರಲ್ಲಿ ಹೊರ ಜಿಲ್ಲೆಯವರೂ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಅವರು ತಮ್ಮ ತವರಿಗೆ ಹೋಗದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಕೆಎಂಎಫ್ನಿಂದ ನೀಡಲಾದ 500 ಲೀಟರ್ ಹಾಲು ಮತ್ತು ದಿನಸಿ ವಿತರಿಸಲಾಯಿತು.