ಕರ್ನಾಟಕ

karnataka

ETV Bharat / state

ಕರಾವಳಿಯಲ್ಲಿ ಇಂದಿನಿಂದ ಜು.31ರವರೆಗೆ ಮೀನುಗಾರಿಕೆ ನಿರ್ಬಂಧ - mangalore latest news

ಲಾಕ್​ಡೌನ್ ಹಿನ್ನೆಲೆಯಲ್ಲಿ ಸಡಿಲಿಕೆ ಮಾಡಲಾಗಿರುವ ಮೀನುಗಾರಿಕಾ ಅವಧಿ ನಿನ್ನೆಗೆ ಮುಕ್ತಾಯಗೊಂಡಿದೆ.ಈ ಹಿನ್ನೆಲೆ ಕರಾವಳಿಯಲ್ಲಿ ಜೂ.15ರಿಂದ ಜುಲೈ 31ರವರೆಗೆ 47 ದಿನಗಳ ಯಾಂತ್ರಿಕೃತ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ.

restrictions to Fishing in mangalore
ಕರಾವಳಿಯಲ್ಲಿ ಇಂದಿನಿಂದ ಜು.31ರವರೆಗೆ ಮೀನುಗಾರಿಕೆ ನಿರ್ಬಂಧ

By

Published : Jun 15, 2020, 10:30 PM IST

ಮಂಗಳೂರು: ಕರಾವಳಿಯಲ್ಲಿ ಜೂ.15ರಿಂದ ಜುಲೈ 31ರವರೆಗೆ 47 ದಿನಗಳ ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಸಡಿಲಿಕೆ ಮಾಡಲಾಗಿರುವ ಮೀನುಗಾರಿಕಾ ಅವಧಿ ನಿನ್ನೆಗೆ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಜುಲೈ 31ರವರೆಗೆ ಸಮುದ್ರ ಮೀನುಗಾರಿಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಈ ಹಿನ್ನೆಲೆಯಲ್ಲಿ ಜೂ.15ರಿಂದ ಜುಲೈ 31ರವರೆಗೆ 10 ಅಶ್ವಶಕ್ತಿಯ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಬೋಟ್ ಮೀನುಗಾರಿಕೆಗೆ ನಿಷೇಧ ಇರಲಿದೆ. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ1986ರ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ‌. ಪ್ರತೀ ವರ್ಷ ಸಮುದ್ರ ಮೀನುಗಾರಿಕೆಗೆ ಜೂನ್ ಮೊದಲ ವಾರದಲ್ಲಿಯೇ ನಿರ್ಬಂಧ ವಿಧಿಸಲಾಗುತ್ತಿತ್ತು. ಆದರೆ, ಈ ಬಾರಿ ಜೂನ್ ಆರಂಭವಾದರೂ 15 ದಿನಗಳ ಕಾಲ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ.

ABOUT THE AUTHOR

...view details