ಕರ್ನಾಟಕ

karnataka

ETV Bharat / state

ಕಾರವಾರ-ಯಶವಂತಪುರ ರೈಲು ಸೇವೆ ಕಾರ್ಯಾರಂಭ

ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲು ಸಂಚಾರ ಇದೀಗ ಮತ್ತೆ ಪುನಾರಂಭ ಮಾಡಿದ್ದು, ಕಾರವಾರ-ಯಶವಂತಪುರ-ಕಾರವಾರ ರೈಲು ಸಂಚಾರ ಆರಂಭವಾಗಿದೆ.

Manglure
Manglure

By

Published : Sep 6, 2020, 12:15 PM IST

ಮಂಗಳೂರು: ಕರಾವಳಿ ವಿಭಾಗದ ಮೂರು ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಿಭಾಗಕ್ಕೆ ರೈಲ್ವೆ ಮಂಡಳಿ ಅನುಮತಿ ನೀಡಿದ್ದು, ಕಾರವಾರ -ಯಶವಂತಪುರ-ಕಾರವಾರ ರೈಲು ಸಂಚಾರ ಆರಂಭವಾಗಿದೆ.

ಸೆಪ್ಟೆಂಬರ್‌ 4ರ ಶುಕ್ರವಾರ ಸಂಜೆ 6.45ಕ್ಕೆ ನಂ.06585 ಯಶವಂತಪುರ ಹಾಗೂ ಕಾರವಾರ ನಡುವೆ ರೈಲು ಸಂಚಾರ ಕಾರ್ಯಾರಂಭಿಸಿದೆ. ಸೆಪ್ಟೆಂಬರ್‌ 5 ರಂದು ಸಂಜೆ 6 ಗಂಟೆಗೆ ನಂ. (6595) ರೈಲು ಕಾರವಾರದಿಂದ ಸಂಚಾರ ಮಾಡಿದೆ.

ಬೆಂಗಳೂರು-ಮಂಗಳೂರಿನ (06515) ನಡುವೆ ವಾರದಲ್ಲಿ ನಾಲ್ಕು ದಿನಗಳ ಕಾಲ ಚಲಿಸುವ ರೈಲು ಸೆಪ್ಟೆಂಬರ್‌ 4 ರಿಂದ ಕಾರ್ಯಾಚರಣೆ ಆರಂಭಿಸಿದೆ. ಸೆಪ್ಟೆಂಬರ್‌ 6 ರಿಂದ ನಂ.(06516) ರೈಲು ಕಾರ್ಯಾರಂಭಿಸಲಿದೆ. ವಾರಕ್ಕೆ ಮೂರು ಬಾರಿ ಬೆಂಗಳೂರು-ಮಂಗಳೂರು ನಡುವೆ ಚಲಿಸುವ ನಂ.(06517) ರೈಲು ಇಂದಿನಿಂದ ಆರಂಭವಾಗಲಿದ್ದು, ಮಂಗಳೂರು - ಬೆಂಗಳೂರು ನಡುವಿನ ನಂ.(06518) ರ ರೈಲು ಸೆಪ್ಟೆಂಬರ್ 5 ರಿಂದ ಕಾರ್ಯಾಚರಣೆ ಆರಂಭಿಸಿದೆ.

ಈ ವಿಶೇಷ ರೈಲುಗಳು ಮುಂದಿನ ಸೂಚನೆ ಬರುವವರೆಗೂ ಕಾರ್ಯನಿರ್ವಹಿಸಲಿದ್ದು, ಈ ರೈಲುಗಳಲ್ಲಿ ಪ್ರಯಾಣ ಮಾಡಲು ಮುಂಗಡ ಬುಕ್ಕಿಂಗ್ ಮಾಡಬೇಕಾಗಿದೆ.‌

ABOUT THE AUTHOR

...view details