ಕರ್ನಾಟಕ

karnataka

By

Published : Aug 22, 2020, 7:13 PM IST

ETV Bharat / state

ದ.ಕ ಜಿಲ್ಲೆಯಲ್ಲಿ 228 ಮಂದಿಗೆ ಕೊರೊನಾ; 320 ಜನ ಗುಣಮುಖ

ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಪ್ರಕರಣಗಳ ವರದಿ ಇಲ್ಲಿದೆ..

Dakshina Kannada District
ದಕ್ಷಿಣಕನ್ನಡ ಜಿಲ್ಲೆಯ ಕೊರೊನಾ ಪ್ರಕರಣಗಳ ವರದಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 228 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಡುವುದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ.

ಇಂದು ಕೊರೊನಾ ದೃಢಪಟ್ಟ 228 ಮಂದಿಯಲ್ಲಿ 150 ಮಂದಿ ಮಂಗಳೂರು ತಾಲೂಕು, 23 ಮಂದಿ ಬಂಟ್ವಾಳ ತಾಲೂಕು, 15 ಮಂದಿ ಪುತ್ತೂರು ತಾಲೂಕು, 8 ಮಂದಿ ಸುಳ್ಯ ತಾಲೂಕು, 7 ಮಂದಿ ಬೆಳ್ತಂಗಡಿ ತಾಲೂಕು ಮತ್ತು 25 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾ ದೃಢಪಟ್ಟವರ ಸಂಖ್ಯೆ 10,137 ಕ್ಕೆ ಏರಿಕೆಯಾಗಿದೆ.

ದ.ಕ. ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 4 ಮಂದಿ ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕಿನ ಇಬ್ಬರು, ಬಂಟ್ವಾಳ ತಾಲೂಕಿನ ಒಬ್ಬರು ಮತ್ತು ಹೊರಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 305 ಕ್ಕೆ ಏರಿಕೆಯಾಗಿದೆ.

ಇಂದು 320 ಮಂದಿ ಗುಣಮುಖರಾಗಿದ್ದು, ಈವರೆಗೆ 7,513 ಮಂದಿ ಗುಣಮುಖರಾಗಿದ್ದಾರೆ. 2,319 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details