ಮಂಗಳೂರು: ವಾಸ್ತು ದೋಷ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೆಟ್ಟಿಲುಗಳನ್ನು ನವೀಕರಣ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡಿವೆ. ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಳೆದ ಕೆಲವು ದಿನಗಳಿಂದ ಮೆಟ್ಟಿಲಿನ ನವೀಕರಣ ಕಾಮಗಾರಿ ನಡೆಯುತ್ತಿದೆ. ಈ ಹಿಂದೆ ಎಂಟು ಮೆಟ್ಟಿಲುಗಳಿದ್ದು, ಇದೀಗ ಒಂಭತ್ತು ಮೆಟ್ಟಿಲುಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮೆಟ್ಟಿಲು ನವೀಕರಣ: ವಾಸ್ತು ದೋಷ ಕಾರಣ? - ಈಟಿವಿ ಭಾರತ ಕನ್ನಡ
ವಾಸ್ತು ದೋಷ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮೆಟ್ಟಿಲುಗಳನ್ನು ನವೀಕರಣ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮೆಟ್ಟಿಲು ನವೀಕರಣ : ವಾಸ್ತು ದೋಷ ಕಾರಣ ?
ವಾಸ್ತುದೋಷದಿಂದಾಗಿ ಕಾಮಗಾರಿ ನಡೆದಿದೆ ಎಂಬ ವದಂತಿಗೆ, ಇದು ವಾಸ್ತು ಕಾರಣಕ್ಕಲ್ಲ. ಮೆಟ್ಟಿಲಿನ ಬದಿಯಲ್ಲಿದ್ದ ನೀರಿನ ಟ್ಯಾಂಕ್ ಶುದ್ದೀಕರಣಕ್ಕಾಗಿ ಮತ್ತು ಇಂಟರ್‌ಲಾಕ್ ಸರಿಯಾಗಿ ಹಾಕದ ಕಾರಣ ನವೀಕರಣ ಕಾಮಗಾರಿ ನಡೆಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ :ದಕ್ಷಿಣ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ 'ನಮ್ಮ ಕ್ಲಿನಿಕ್' ಆರಂಭ