ಕರ್ನಾಟಕ

karnataka

ETV Bharat / state

ದ.ಕ ಜಿಲ್ಲೆಯ ಲಾಕ್​​ಡೌನ್ ಮಾರ್ಗಸೂಚಿ ಬಿಡುಗಡೆ ; ಅಗತ್ಯ ಸೇವೆ ಹೊರತುಪಡಿಸಿ ಉಳಿದವು ಬಂದ್

ಸಾರ್ವಜನಿಕ, ಖಾಸಗಿ ಸಾರಿಗೆ ಸಂಚಾರಗಳು ಸಂಪೂರ್ಣ ಬಂದ್ ಇರಲಿದ್ದು, ಹೆದ್ದಾರಿಗಳಲ್ಲಿ ಸರಕು ಸಾಗಾಣಿಕೆಯ ವಾಹನ ಸಂಚಾರಗಳಿಗೆ ಅವಕಾಶ ನೀಡಲಾಗುತ್ತದೆ..

Mangalore
ದ.ಕ.ಜಿಲ್ಲೆಯ ಲಾಕ್​​ಡೌನ್ ಮಾರ್ಗಸೂಚಿ ಬಿಡುಗಡೆ

By

Published : Jul 14, 2020, 7:27 PM IST

ಮಂಗಳೂರು :ದ‌.ಕ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದೀಚೆಗೆ ಕೋವಿಡ್-19 ಸೋಂಕು ಹರಡುವ ಪ್ರಕರಣ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಲಾಕ್​ಡೌನ್​ನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದ.ಕ ಜಿಲ್ಲಾಧಿಕಾರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗ್ಗೆ 8 ರಿಂದ 11ರವರೆಗೆ ದಿನಸಿ ಅಂಗಡಿಗಳು, ಹಾಲು, ತರಕಾರಿ, ಹಣ್ಣು, ಮೀನು, ಮಾಂಸಗಳ ಮಾರುಕಟ್ಟೆಗಳು ತೆರೆದಿರುತ್ತವೆ. ಈ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಬಾರ್,ವೈನ್ ಶಾಪ್​ಗಳು,ಮಾಲ್, ವಾಣಿಜ್ಯ ಮಳಿಗೆಗಳು ಸಂಪೂರ್ಣ ಬಂದ್ ಆಗಲಿದೆ. ಅಲ್ಲದೆ ಕಂಟೇನ್ಮೆಂಟ್ ಝೋನ್​ಗಳಲ್ಲಿ ಸಂಪೂರ್ಣ ಬಂದ್ ಇರಲಿದೆ.

ಸಾರ್ವಜನಿಕ, ಖಾಸಗಿ ಸಾರಿಗೆ ಸಂಚಾರಗಳು ಸಂಪೂರ್ಣ ಬಂದ್ ಇರಲಿದ್ದು, ಹೆದ್ದಾರಿಗಳಲ್ಲಿ ಸರಕು ಸಾಗಾಣಿಕೆಯ ವಾಹನ ಸಂಚಾರಗಳಿಗೆ ಅವಕಾಶ ನೀಡಲಾಗುತ್ತದೆ. ಅದೇ ರೀತಿ ಆರೋಗ್ಯ ಸೇವೆ ಸೇರಿದಂತೆ ತುರ್ತು ಸೇವೆಗಳು, ಮೆಡಿಕಲ್​ಗಳು‌ ಎಂದಿನಂತೆ ತೆರೆದಿರುತ್ತವೆ. ಅಲ್ಲದೆ ಅಗತ್ಯ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿದೆ.

ಇನ್ನು, ಕೃಷಿಗೆ ಸಂಬಂಧಿತ ಚಟುವಟಿಕೆಗಳಿಗೂ ವಿನಾಯಿತಿ ಇರಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details