ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲದ ಬಡ್ಡಿಯನ್ನು ಕಡಿತಗೊಳಿಸಿದ್ದು, ಸದಸ್ಯರ ನೆರವಿಗೆ ಬದ್ಧರಾಗಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ ಹೇಳಿದ್ದಾರೆ.
ಕೊರೊನಾ ಎಫೆಕ್ಟ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಡ್ಡಿ ದರ ಕಡಿತ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಅವರ ನಿರ್ದೇಶನದೊಂದಿಗೆ ಜಿಲ್ಲೆಯಲ್ಲಿ ಯೋಜನೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜು. 9ರ ಬಳಿಕ ಜಿಲ್ಲಾ ಕಚೇರಿಯು ಮಂಗಳೂರಿನಿಂದ ಬಂಟ್ವಾಳದಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದರು.
ಉಳಿತಾಯ ಮೊತ್ತ 136 ಕೋಟಿ ರೂ: 2019-20ನೇ ಸಾಲಿನ ವರ್ಷಾಂತ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 2,806 ಹೊಸ ಸಂಘಗಳು ಸೇರಿದಂತೆ ಒಟ್ಟು 22,074 ಸಂಘಗಳಿದ್ದು, ಒಟ್ಟು 950 ಕೋಟಿ ರೂ.ಗಳ ಸಾಲದ ವ್ಯವಹಾರ ನಡೆಸಲಾಗಿದೆ.
ಕಳೆದ ಸಾಲಿನಲ್ಲಿ ಸದಸ್ಯರ ಉಳಿತಾಯ ಮೊತ್ತ 136 ಕೋಟಿ ರೂ. ಆಗಿದ್ದು, ಈ ಸಾಲಿನಲ್ಲಿ 768 ಕೋಟಿ ರೂ.ಗಳ ಸಾಲ ವಿತರಣೆಯ ಗುರಿ ಹೊಂದಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ. ಉಪಸ್ಥಿತರಿದ್ದರು.