ಕರ್ನಾಟಕ

karnataka

ETV Bharat / state

ಮಳೆ ಮುಂದುವರಿಯುವ ಸಾಧ್ಯತೆ: ಕರಾವಳಿಯಲ್ಲಿ ರೆಡ್​​​​​ ಅಲರ್ಟ್​ - ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ತೀವ್ರವಾಗಿ ಬಿರುಸು ಪಡೆದಿದ್ದು, ಇಂದೂ ಯಥಾವತ್ತಾಗಿ ಮುಂದುವರಿಯುವ ಸಾಧ್ಯತೆ ಇರುವ ಕಾರಣ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಳೆಯಿಂದ ಗುಡ್ಡ ಕುಸಿತ

By

Published : Aug 7, 2019, 12:01 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ತೀವ್ರವಾಗಿ ಬಿರುಸು ಪಡೆದಿದ್ದು, ಇಂದೂ ಯಥಾವತ್ತಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ನಿರಂತರವಾಗಿರುವ ಗಾಳಿ-ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ ಮುಂಜಾಗೃತಾ ಕ್ರಮವಾಗಿ ಇಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ.

ಕರಾವಳಿಯಲ್ಲಿ ರೆಡ್​ ಅಲರ್ಟ್​

ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯಾದ್ಯಂತ ಅಲ್ಲಲ್ಲಿ ಕೆಲವು ಕಡೆಗಳಲ್ಲಿ ನೀರು ನುಗ್ಗಿ ರಸ್ತೆ ಸಂಚಾರಕ್ಕೆ ಅಡ್ಡಿ, ಗುಡ್ಡ ಕುಸಿತ, ಮರ ಬಿದ್ದು ಹಾನಿ ಹಾಗೂ ಕಡಲ್ಕೊರೆತದ ಭೀತಿ ಎದುರಾದ ಘಟನೆಗಳು ನಡೆದಿದೆ.

ABOUT THE AUTHOR

...view details