ಮಂಗಳೂರು:ಇಂದು ಬೆಳಗ್ಗಿನಿಂದ ಸುರಿದ ಧಾರಾಕಾರ ಮಳೆಗೆ ನಗರದ ಕೊಟ್ಟಾರ ಚೌಕಿ ಪ್ರದೇಶದ, ಬಸ್ ನಿಲ್ದಾಣ ಸೇರಿದಂತೆ ಹಲವಡೆ ತಗ್ಗು ಪ್ರದೇಶಗಳೆಲ್ಲ ಅಕ್ಷರಶಃ ಕೆರೆಯಂತಾಗಿದೆ. ಮಳೆಯಿಂದ ಬೈಕ್ಗಳು ಮುಳುಗಡೆಯಾಗುತ್ತವೆ ಎಂಬ ಭೀತಿಯಿಂದ ಪೊಲೀಸರು ಬೈಕ್ ಸವಾರರಿಗೆ ಪರ್ಯಾಯ ಮಾರ್ಗದಲ್ಲಿ ತೆರಳಲು ಸೂಚನೆ ನೀಡುತ್ತಿರುವ ದೃಶ್ಯ ಕಂಡು ಬಂದಿತು.
ಮಳೆಗೆ ಕೆರೆಯಂತಾದ ರಸ್ತೆ; ನಾಳೆ, ನಾಡಿದ್ದೂ ರೆಡ್ ಅಲರ್ಟ್ ಘೋಷಣೆ
ಮಂಗಳೂರಿನಲ್ಲಿ ಇಂದು ಬೆಳಗ್ಗಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೆ ನಾಳೆ, ನಾಡಿದ್ದೂ ಸಹ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಂದು ಬೆಳಗ್ಗಿನಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೆ ನಾಳೆ, ನಾಡಿದ್ದೂ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೆ, ಇಂದು ಸುರಿದ ಮಳೆಗೆ ಚೌಕಿ ಪ್ರದೇಶ ಸಂಪೂರ್ಣ ಜಲಮಯವಾಗಿದೆ. ಬಸ್, ಆಟೋ, ಕಾರುಗಳನ್ನು ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ದ್ವಿಚಕ್ರ ವಾಹನ ಈ ಪ್ರದೇಶದಲ್ಲಿ ಸಂಚರಿಸಿದರೆ ಮುಳಗಡೆಯಾಗಬಹುದು ಎಂದು ಪೊಲೀಸರು ಪರ್ಯಾಯ ಮಾರ್ಗದ ಮೂಲಕ ಸಂಚರಿಸುವಂತೆ ಹಿಂದಕ್ಕೆ ಕಳುಹಿಸುತ್ತಿದ್ದರು.
ಕೊಟ್ಟಾರ ಚೌಕಿ ಪ್ರದೇಶ ತಗ್ಗು ಪ್ರದೇಶವಾಗಿದ್ದರಿಂದ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಹಾಗಾಗಿ ಅಪಾರ ಪ್ರಮಾಣದ ನೀರು ಇಲ್ಲಿಯೇ ಸಂಗ್ರಹವಾಗುತ್ತದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕಾರ್ಪೊರೇಟರ್ ಕಿರಣ್ ಕುಮಾರ್, ಕಾರ್ಮಿಕರ ಸಹಾಯದಿಂದ ಸಂಗ್ರಹಗೊಂಡ ನೀರನ್ನು ಮ್ಯಾನ್ ಹೋಲ್ ಮೂಲಕ ಹರಿಯುಂತೆ ಮಾಡಿದರು. ಆ ಬಳಿಕ ದ್ವಿಚಕ್ರ ವಾಹನಗಳು ಸಂಚಾರ ಮಾಡುವಂತಾಯಿತು.