ಮಂಗಳೂರು:ದ.ಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ ಮೂವರು ಗುಣಮುಖರಾಗಿದ್ದು, ಸತತ ಎರಡನೇ ದಿನವು ಶುಭ ಸುದ್ದಿ ಸಿಕ್ಕಿದೆ.
ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ ಯುವಕ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಇಂದು ಕಾಸರಗೋಡಿನ ಮೂವರು ಗುಣಮುಖರಾಗಿದ್ದಾರೆ. ಮಾರ್ಚ್ 24ರಂದು ಕೇರಳದ ನಾಲ್ಕು ಮಂದಿಗೆ ಮಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಇದರಲ್ಲಿ ಮೂವರು ಗುಣಮುಖರಾಗಿದ್ದಾರೆ.