ಕರ್ನಾಟಕ

karnataka

ETV Bharat / state

ಒಂದೇ ಉಸಿರಿನಲ್ಲಿ 28 ಬಾರಿ ಪಲ್ಟಿ.. ವರ್ಲ್ಡ್ ವೈಡ್ ಬುಕ್ ರೆಕಾರ್ಡ್​ನಲ್ಲಿ ದಾಖಲೆ - ಚಂದ್ರಶೇಖರ ರೈ ವರ್ಲ್ಡ್ ವೈಡ್ ಬುಕ್ ರೆಕಾರ್ಡ್

World Wide Book Record: ಬಂಟ್ವಾಳ ತಾಲೂಕಿನ ನಿವಾಸಿ ಈಜುಪಟು ಕೆ ಚಂದ್ರಶೇಖರ ರೈ ನೀರಲ್ಲಿ 28 ಬಾರಿ ಉಸಿರು ಕಟ್ಟಿ ಪಲ್ಟಿ ಹೊಡೆದು ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾರೆ.

World Wide Book Record
World Wide Book Record

By

Published : Jun 12, 2023, 1:02 PM IST

Updated : Jun 12, 2023, 2:25 PM IST

ಮಂಗಳೂರು (ದಕ್ಷಿಣ ಕನ್ನಡ): ನೀರಿನಲ್ಲಿ ಸಾಧನೆ ಮಾಡಬೇಕು ಎಂದರೆ, ಮನುಷ್ಯ ವಿಶೇಷ ಪ್ರತಿಭಾನ್ವಿತನಾಗಿರಬೇಕು. ನೀರು ಬದುಕಿಗೆಷ್ಟು ಮುಖ್ಯವೋ ಪ್ರಾಣಕ್ಕೂ ಅಷ್ಟೇ ಅಪಾಯಕಾರಿ. ಇಂತಹುದರಲ್ಲಿ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿಕೊಂಡು 28 ತಿರುವು ಹೊಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೂರಿಕುಮೇರ್ ನಿವಾಸಿ ಕೆ ಚಂದ್ರಶೇಖರ ರೈ ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾರೆ.

ಇವರು ನೀರಿನಲ್ಲಿ ಉಸಿರು ಕಟ್ಟಿಕೊಂಡು ಮುಂಭಾಗದಿಂದ ತಿರುವು ಹೊಡೆಯುವ ವಿಶೇಷ ಪ್ರತಿಭೆ ಹೊಂದಿದ್ದಾರೆ. ಇವರು ಒಂದು ನಿಮಿಷ ಎರಡು ಸೆಕೆಂಡ್​ನಲ್ಲಿ ಉಸಿರು ಕಟ್ಟಿಕೊಂಡು ಮುಂಭಾಗದಿಂದ 28 ಸುತ್ತು ಪಲ್ಟಿ ಹೊಡೆದಿದ್ದಾರೆ. ಇದು ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿಯೂ ದಾಖಲೆ:ಚಂದ್ರಶೇಖರ್ ರೈ ಅವರು ಉಸಿರು ಕಟ್ಟಿಕೊಂಡು ಮುಂಭಾಗದಿಂದ 29 ತಿರುವು ಹೊಡೆಯುವ ಮೂಲಕ ಈ ಮೊದಲು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದು, ಇಂಡಿಯಾ ಬುಕ್ ಅಪ್ ರೆಕಾರ್ಡ್​ನ ಪ್ರಮಾಣಪತ್ರ ಮತ್ತು ಪದಕ ಇವರಿಗೆ ದೊರೆತಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಚಂದ್ರಶೇಖರ ರೈ ಅದೇ ಸಾಧನೆಯ ವಿಡಿಯೋವನ್ನು ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿದ್ದರು. ಅಲ್ಲಿಯೂ ಅವರ ಸಾಧನೆಯನ್ನೂ ದಾಖಲಿಸಲಾಗಿದೆ.

ಅಮೆರಿಕದ ವ್ಯಕ್ತಿಯಿಂದ 36 ಬಾರಿ ನೀರಲ್ಲಿ ತಿರುವು: ಮಂಗಳೂರು ಈಜುಕೊಳದಲ್ಲಿ ಚಂದ್ರ ಶೇಖರ್ ರೈ ಮುಂಭಾಗದಿಂದ ತಿರುವು ಹೊಡೆಯುವುದನ್ನು ಗಮನಿಸಿದ ರಾಷ್ಟ್ರೀಯ ಈಜುಪಟುಗಳಾದ ಸೀತಾರಾಮ್ ಮತ್ತು ‌ಮುಹಮ್ಮದ್ ಅವರು ಇದೊಂದು ದಾಖಲೆಯಾಗಲಿದೆ ಎಂದು ತಿಳಿಸಿದ್ದರು. ಇಂತಹ ಒಂದು ದಾಖಲೆ ಗಿನ್ನೆಸ್​​​​​ ನಲ್ಲಿ ದಾಖಲಾಗಿದ್ದು, ಅಮೆರಿಕದ ವ್ಯಕ್ತಿಯೊಬ್ಬರು ಉಸಿರು ಕಟ್ಟಿ 36 ಬಾರಿ ಮುಂಭಾಗದಿಂದ ಪಲ್ಟಿ ಹೊಡೆದು ಗಿ‌ನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಇದೀಗ ಚಂದ್ರಶೇಖರ್ ರೈ ಅವರು ಇಂಡಿಯಾ ಬುಕ್ ಅಫ್ ರೆಕಾರ್ಡ್ ಮತ್ತು ವರ್ಲ್ಡ್ ವೈಡ್ ಬುಕ್ ರೆಕಾರ್ಡ್​ನಲ್ಲಿ ದಾಖಲೆ ಮಾಡಿದ್ದು, ಗಿನ್ನೆಸ್​​ ದಾಖಲೆಗಾಗಿ ಪ್ರಯತ್ನಿಸುತ್ತಿದ್ದಾರೆ.

ಉಸಿರು ಕಟ್ಟಿ ನಿಲ್ಲಲ್ಲು ಪ್ರಾಣಾಯಾಮ: ಈ ದಾಖಲೆಗೆ ಕಳುಹಿಸುವ ದಿನ ಚಂದ್ರಶೇಖರ್ ರೈ ಉರ್ಧ್ವಾಸನ ಮಾಡಿ ಬಳಿಕ ಇದನ್ನು ಮಾಡಿದ್ದರು. ದೀರ್ಘವಾಗಿ ನೀರಿನಲ್ಲಿ ಉಸಿರು ಕಟ್ಟಿ ನಿಲ್ಲಲ್ಲು ಅಂತಾರಾಷ್ಟ್ರೀಯ ಯೋಗಪಟು ಕವಿತಾ ಅವರ ಮೂಲಕ ಪ್ರಾಣಾಯಾಮ ಅಭ್ಯಸಿಸಿದ್ದಾರೆ. ಮಂಗಳೂರು ಈಜುಕೊಳದಲ್ಲಿ ಕೆ ಚಂದ್ರಶೇಖರ್​​ ರೈ ಅವರು ಮಾಡಿದ ಸಾಧನೆಯನ್ನು ಅಂತಾರಾಷ್ಟ್ರೀಯ ಯೋಗಪಟು ಕವಿತಾ ಎಂಬವರು ತಮ್ಮ ಹೆಚ್ ಡಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದರು.

ಆ ಬಳಿಕ ಅದನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​ನ ನಿಯಮಾವಳಿ ಪ್ರಕಾರ ದಾಖಲೆಗೆ ಸಲ್ಲಿಸಿದ್ದು, ಇವುಗಳನ್ನು ಪರಿಶೀಲಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಅವರ ಹೆಸರನ್ನು ದಾಖಲೆಯಲ್ಲಿ ಸೇರಿಸಿದೆ. ಆ ಬಳಿಕ ಇದೇ ವಿಡಿಯೋವನ್ನು ವರ್ಲ್ಡ್ ವೈಡ್ ಬುಕ್ ರೆಕಾರ್ಡ್​​​​ಗೆ ಕಳುಹಿಸಿದ್ದು, ಅವರು ತಮ್ಮ ದಾಖಲೆಯಲ್ಲಿ ಸೇರಿಸಿದ್ದಾರೆ.

ಗಿನ್ನೆಸ್ ದಾಖಲೆಗಾಗಿ ಪ್ರಯತ್ನ:ಚಂದ್ರ ಶೇಖರ್ ರೈ ಅವರು ಬಾಲ್ಯದಿಂದಲೇ ಕ್ರೀಡಾಸಕ್ತಿ ಹೊಂದಿದವರು. ಯಾರ ಮಾರ್ಗದರ್ಶನ ಇಲ್ಲದೇ 2005 ರಲ್ಲಿ ಈಜು ಕಲಿತ ಅವರು ಈಜಿನಲ್ಲಿ ವಿವಿಧ ಭಂಗಿಗಳನ್ನು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಇದೀಗ ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ತರಬೇತುದಾರರಾಗಿ, ಲೈಫ್​​ ಗಾರ್ಡ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಗಿನ್ನೆಸ್ ದಾಖಲೆಗಾಗಿ ಪ್ರಯತ್ನ ಪಡುತ್ತಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಚಂದ್ರಶೇಖರ್ ರೈ ಅವರು 2023 ರ ಏಪ್ರಿಲ್​ 13 ರಂದು ಈ ದಾಖಲೆ ನಿರ್ಮಾಣವಾಗಿದೆ. ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ನಲ್ಲಿ ಈ ದಾಖಲೆ ಮಾಡಿದ್ದೇನೆ. ಸೀತಾರಾಮ ಶೆಟ್ಟಿ, ಮುಹಮ್ಮದ್, ಲಿಯೋ ಎಂಬವರ ಪ್ರೋತ್ಸಾಹದಿಂದ ಇದನ್ನು ಮಾಡಲು ಸಾಧ್ಯವಾಗಿದೆ. ಇದೀಗ ಗಿನ್ನೆಸ್​ ದಾಖಲೆಗೆ ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ. ನೀರಿನಲ್ಲಿ ಒಂದೆರಡು ತಿರುವು ಹೊಡೆಯುವುದು ತುಂಬಾ ಕಷ್ಟ. ಅಂತಹದ್ದರಲ್ಲಿ ಚಂದ್ರಶೇಖರ ರೈ ಅವರು ಒಂದೇ ಉಸಿರಿನಲ್ಲಿ 28 ತಿರುವು ಮಾಡಿರುವುದು ನಿಜವಾಗಿಯೂ ಅದ್ಬುತ ಸಾಧನೆಯಾಗಿದೆ‌.

ಇದನ್ನೂ ಓದಿ:ಬಟ್ಟೆ ಮೇಲೆ ಮೆಹಂದಿ ಡಿಸೈನ್ ಮಾಡಿ ದಾಖಲೆ ನಿರ್ಮಿಸಿದ ಯುವತಿ..!

Last Updated : Jun 12, 2023, 2:25 PM IST

ABOUT THE AUTHOR

...view details